Mon. Jan 27th, 2025

Mangaluru: ಬಜ್ಪೆಯ ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ – 3 ಕೋಟಿ ರೂ.ಗೆ ಡಿಮ್ಯಾಂಡ್!!

ಮಂಗಳೂರು (ಜ.26): ನಗರದ ಬಜ್ಪೆಯ ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ ಬಂದಿರುವಂತಹ ಘಟನೆ ನಡೆದಿದೆ.

ಇದನ್ನೂ ಓದಿ: ಬಂದಾರು : ಪೆರ್ಲ -ಬೈಪಾಡಿ ಸ. ಹಿ .ಪ್ರಾ ಶಾಲೆಯಲ್ಲಿ 76 ನೇ ವರ್ಷದ ಗಣರಾಜ್ಯೋತ್ಸವ ಆಚರಣೆ

ಉದ್ಯಮಿ ರೊನಾಲ್ಡ್​​ಗೆ ಭೂಗತ ಪಾತಕಿ ಕಲಿ ಯೋಗೇಶ್ ಹೆಸರಲ್ಲಿ ಜನವರಿ 17ರಂದು ದೂರವಾಣಿ ಕರೆಮಾಡಿದ್ದು, 3 ಕೋಟಿ ರೂ. ನೀಡು, ಇಲ್ಲಾಂದರೆ ಮನೆಯವರನ್ನೆಲ್ಲಾ ಕೊಲೆ‌ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ‌ ಕೇಸ್​ ದಾಖಲಾಗಿದೆ.

ರೊನಾಲ್ಡ್ ಕೆಂಪು ಕಲ್ಲಿನ‌ ಕೋರೆ ಹಾಗೂ ಇತರೆ ಉದ್ಯಮ ನಡೆಸುತ್ತಿದ್ದಾರೆ. ಕಲಿ ಯೋಗಿಶ್ ಹೆಸರಲ್ಲಿ ಭೂಗತ ಪಾತಕಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ‌ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು