Fri. Jan 2nd, 2026

Monalisa : ಕುಂಭಮೇಳದ ಜೇನು ಕಣ್ಣ ಸುಂದರಿ ಮೊನಾಲಿಸಾಳ ಆರೋಗ್ಯ ಸ್ಥಿತಿ ಗಂಭೀರ !!!

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಕೋಟ್ಯಂತರ ಮಂದಿಯ ನಡುವೆ, ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿ ಮೊನಾಲಿಸಾ ಎಲ್ಲರನ್ನು ತನ್ನತ್ತ ಸೆಳೆಯುವ ಮೂಲಕ ರಾತ್ರೋ ರಾತ್ರಿ ಇಡೀ ದೇಶದ ಗಮನ ಸೆಳೆದಿದ್ದಳು. ಸೋಷಿಯಲ್‌ ಮೀಡಿಯಾಗಳಲ್ಲಿ ಈಕೆಯದ್ದೇ ಕಾರುಬಾರು. ಆದರೆ ಕೆಲವು ದಿನಗಳ ಹಿಂದೆ ಮೊನಾಲಿಸಾ ಕುಂಭಮೇಳದಿಂದ ಹೊರ ನಡೆದಿದ್ದಳು. ಮೊನಾಲಿಸಾ ಇದೀಗ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ ಎಂಬ ಸುದ್ದಿ ಎಂದು ಹರಿದಾಡುತ್ತಿದೆ.

ಇದನ್ನೂ ಓದಿ: ಉಜಿರೆ: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಭಟ್ ಗೆ ಸನ್ಮಾನ

ಮೊನಾಲಿಸಾ ಕುಟುಂಬ ಇತ್ತೀಚೆಗೆ ಒಂದು ಪುಟ್ಟ ಮನೆಯನ್ನು ಕಟ್ಟಿದೆ. ಆ ಮನೆ ಕಟ್ಟಲು ಸಾಲ ಮಾಡಿಕೊಂಡಿದೆ. ಆ ಸಾಲವನ್ನು ತೀರಿಸಲು ಮೊನಾಲಿಸಾ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಿ ಸ್ವಲ್ಪ ಹಣ ಸಂಪಾದನೆ ಮಾಡುತ್ತಿದ್ದಳು.

ತುಂಬಾ ಸಾಲ ಮಾಡಿಕೊಂಡಿದ್ದ ತಂದೆಗೆ ಸಹಾಯ ಮಾಡಲು ಮೊನಾಲಿಸಾ ಮಹಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಿ ದಿನಕ್ಕೆ 500 ರಿಂದ 1000 ರೂಪಾಯಿ ಸಂಪಾದನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಆದರೀಗ ಸೆಲ್ಫಿಗಾಗಿ ಬಂದ ಜನ ರುದ್ರಾಕ್ಷಿ ಮಾಲೆ ಖರೀದಿ ಮಾಡದೆ ಫೋಟೋ ಕ್ಲಿಕ್ಕಿಸಿಕೊಂಡು ಎಸ್ಕೇಪ್ ಆಗುತ್ತಿದ್ದಾರೆ. ಆಕೆಯ ಸಮಯ ವ್ಯರ್ಥ ಮಾಡುವುದು ಮಾತ್ರವಲ್ಲದೆ ಆಕೆಯ ಹಿಂದೆ ಬಿದ್ದು ಆಕೆಯ ಕೆಲಸಕ್ಕೂ ತೊಂದರೆ ಕೊಡುತ್ತಿದ್ದಾರೆ.

ಇದರಿಂದಾಗಿ ಮೊನಾಲಿಸಾ ಸಾಲ ತೀರಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಹಾಸಿಗೆ ಹಿಡಿದಿದ್ದಾಳೆ ಎನ್ನಲಾಗುತ್ತಿದೆ. ಫೋಟೋ ತೆಗೆಸಿಕೊಳ್ಳಲು ಜನ ಧಮ್ಕಿ ಹಾಕುತ್ತಿದ್ದು, ಆಕೆಯ ಮನೆಗೆ ಬಂದು ತೊಂದರೆ ಕೊಡುತ್ತಿದ್ದು ಮೊನಾಲಿಸಾ ಸಿಕ್ಕಾಪಟ್ಟೆ ಭಯಗೊಂಡಿದ್ದಾಳೆ. ಭಯದಲ್ಲೇ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಮೊನಾಲಿಸಾ ಆರೋಗ್ಯ ಹದಗೆಡುತ್ತಿದ್ದು ಕುಟುಂಬಸ್ಥರಿಗೆ ಆಕೆಯ ಆರೋಗ್ಯದ ಬಗ್ಗೆ ಚಿಂತೆ ಹೆಚ್ಚಾಗಿದೆ.

Leave a Reply

Your email address will not be published. Required fields are marked *