Wed. Apr 16th, 2025

Mysore: ಥೈಲ್ಯಾಂಡ್‌ ಬ್ಯೂಟಿ ಇಟ್ಕೊಂಡು ಹೈಟೆಕ್‌ ವೇಶ್ಯಾವಾಟಿಕೆ ದಂಧೆ – ವೇಶ್ಯಾವಾಟಿಕೆ ನಡೆಸುತ್ತಿದ್ದವ ಅಂದರ್

ಮೈಸೂರು (ಜ.27): ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಪತ್ತೆಯಾಗಿದೆ. ಸರ್ಕಾರಿ ಕೆಲಸ ಬಿಟ್ಟು ಥೈಲ್ಯಾಂಡ್​ನಿಂದ ಯುವತಿಯನ್ನು ಕರೆತಂದು ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿನ ಹೋಟೆಲ್​ನಲ್ಲಿ​ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದವನನ್ನು ಸರಸ್ವತಿಪುರಂ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರತನ್ ಬಂಧಿತ ಆರೋಪಿ.

ಇದನ್ನೂ ಓದಿ: ಉಡುಪಿ: ಯಕ್ಷಗಾನ ಕಲಾವಿದ ನಿತಿನ್‌ ಆಚಾರ್ಯ ಮೇಲೆ ಹಲ್ಲೆ ಪ್ರಕರಣ

ಆರೋಪಿ ರತನ್​ ಕೆಎಸ್​​ಆರ್​​ಟಿಸಿ ನೌಕರಿ ಬಿಟ್ಟು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದನು. ವೈಶ್ಯಾವಾಟಿಕೆಗಾಗಿ ಥೈಲ್ಯಾಂಡ್​ನಿಂದ​​ ಯುವತಿಯನ್ನು ಕರೆಸಿದ್ದನು. ರತನ್ ನಡೆಸುತ್ತಿದ್ದ ವೇಶ್ಯಾವಾಟಿಕೆಗೆ ರೇವಣ್ಣ ಎಂಬಾತ ಸಾಥ್ ನೀಡಿದ್ದನು.

ಆರೋಪಿ ರತನ್​ ​ಪ್ರತಿ ಗಿರಾಕಿಯಿಂದ 8-10 ಸಾವಿರ ರೂ. ವಸೂಲಿ ಮಾಡುತ್ತಿದ್ದನು. ಈ ಮಾಹಿತಿ ತಿಳಿದ ಸರಸ್ವತಿಪುರಂ ಠಾಣೆ ಪೊಲೀಸರು, ಶನಿವಾರ ಹೊಟೇಲ್​ ಮೇಲೆ ದಾಳಿ ಮಾಡಿ, ಇಬ್ಬರು ಯುವತಿಯರ ರಕ್ಷಣೆ ಮಾಡಿದ್ದಾರೆ. ಆರೋಪಿ ರತನ್​ ಸೇರಿದಂತೆ ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ.

ಥೈಲ್ಯಾಂಡ್​ನಿಂದ​​ ಬಂದ ಯುವತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಬ್ಯುಸಿನೆಸ್ ಪರ್ಪಸ್​ಗೆ ಬಂದಿದ್ದಾಗಿ ಹೇಳಿದ್ದಳು. ಒಂದು ದಿನದ ಹಿಂದೆಯಷ್ಟೇ ಮೈಸೂರಿಗೆ ಬಂದಿದ್ದೇನೆ ಎಂದು ಹೇಳಿದ್ದಾಳೆ. ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *