ಉಡುಪಿ:(ಜ.27) ಗುಜ್ಜರ ಬೆಟ್ಟುವಿನ ಖಾಸಗಿ ಹೋಂ ಸ್ಟೇ ಮ್ಯಾನೇಜರ್ ನ ಕೊಲೆಗೆ ಯತ್ನ ನಡೆಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳ್ತಂಗಡಿ: ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ
ಜನವರಿ 24 ರ ರಾತ್ರಿ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಭೈರವಿ ಹೋಮ್ ಸ್ಟೇ ಕಟ್ಟಡದ ಒಳಗೆ ಅಡುಗೆಕೋಣೆ ಬಳಿ ಆರೋಪಿತ ಶ್ರೀಕಾಂತ ಯಾನೆ ರಾಜು (30) ಎಂಬಾತನು ಕೆಲಸ ಬಿಡುವ ವಿಚಾರವಾಗಿ ಹೋಮ್ ಸ್ಟೇ ನ ಮ್ಯಾನೇಜರ್ ಗುರುರಾಜ್ (33) ಎಂಬವರಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ನಂತರ ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಗುರುರಾಜ್ ನನ್ನು ಕೊಲೆ ಮಾಡುವ ಉದ್ದೇಶದಿಂದ ಅಲ್ಲೇ ಅಡುಗೆ ಕೋಣೆಯಲ್ಲಿದ್ದ ಒಂದು ಚಾಕುವನ್ನು ತೆಗೆದುಕೊಂಡು ಗುರುರಾಜ್ ನ ಹೊಟ್ಟೆಯ ಬಲಭಾಗಕ್ಕೆ ಇರಿದು, ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2025, ಕಲಂ: 352, 109 BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.