ಉಜಿರೆ :(ಜ.27) ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೀಗ ಮತ್ತೊಂದು ಸಾಧನೆ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಭಾಷ್ಯ ಬರೆದಿದೆ. ಎಸ್ ಡಿ ಎಂ ಆಸ್ಪತ್ರೆಯಲ್ಲಿ ವಿಶ್ವದ ಮೊದಲ ಸಂಪೂರ್ಣ ಬೆನ್ನು ಮೂಳೆಯ ಗೆಡ್ಡೆ ತೆಗೆಯುವಿಕೆ ಮತ್ತು ಯಶಸ್ವಿ ಡ್ಯೂರಲ್ ದುರಸ್ತಿಯ ಶಸ್ತ್ರ ಚಿಕಿತ್ಸೆ ಅತ್ಯಂತ ಯಶಸ್ವಿಯಾಗಿ ನಡೆದಿದೆ.
ಇದನ್ನೂ ಓದಿ: ಮಂಗಳೂರು: ಕುಂಪಲ ಗ್ರಾಮದಲ್ಲಿ ಸಾಲು ಸಾಲು ಅಕಾಲಿಕ ಮೃತ್ಯು
ಈ ಹಿನ್ನೆಲೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಈ ಸಾಧನೆ ಮಾಡಿದ ಡಾ. ಮಹೇಶ್ ಕೆ. ಮತ್ತು ಡಾ. ಶತಾನಂದ ಪ್ರಸಾದ್ ರಾವ್ ಹಾಗೂ ಅವರ ತಂಡವನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಧಾರವಾಡದ ಮೆಡಿಕಲ್ ಕಲ್ಪನೆ ಇಟ್ಟುಕೊಂಡು ಉಜಿರೆಯಲ್ಲಿ ಕೂಡ ಆಸ್ಪತ್ರೆ ಆರಂಭಿಸಿದೆವು. ಉಜಿರೆಯಲ್ಲಿರುವ ನಮ್ಮ ಸಣ್ಣ ಆಸ್ಪತ್ರೆಯಲ್ಲಿನ ವೈದ್ಯರು ಈಗ ದೊಡ್ಡ ಸಾಧನೆ ಮಾಡಿರುವುದು ನನಗೆ ಸಂತಸ ತಂದಿದೆ ಎಂದರು.
ಇಂತಹ ಶಸ್ತ್ರಚಿಕಿತ್ಸೆಯನ್ನು ಹಳ್ಳಿಗಳಲ್ಲಿ ಮಾಡಲು ಹೆದರುತ್ತಾರೆ. ಮಂಗಳೂರಿಗೆ ಹೋಗುತ್ತಾರೆ. ಆದರೆ ಹಳ್ಳಿಯಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆಗಳು ಆಗುವ ಮೂಲಕ ಜನರಲ್ಲಿ ಇರುವ ಭಯ ದೂರವಾಗುತ್ತದೆ. ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿರುವ ಆಸ್ಪತ್ರೆಗಳ ಮೇಲೆ ನಂಬಿಕೆ ಉಳಿಯುತ್ತೆ ಅಂದರು. ಇದೇ ವೇಳೆ ಈ ಸಾಧನೆ ಮಾಡಿದ ಡಾ. ಮಹೇಶ ಮತ್ತು ಡಾ. ಶತಾನಂದರನ್ನು ಅಭಿನಂದಿಸಿದರು. ಬಳಿಕ ಮಾತನಾಡಿದ, ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು, ಧರ್ಮಸ್ಥಳದಲ್ಲಿ ಪವಡಗಳು ನಡೆಯುವುದು ನಾವು ಕೇಳಿದ್ದೇವೆ, ನೋಡಿದ್ದೇವೆ. ಉಜಿರೆಯ ಆಸ್ಪತ್ರೆಯಲ್ಲೂ ಇಂತಹ ಪವಾಡ ಮತ್ತು ಮ್ಯಾಜಿಕ್ ನಡೆದಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ವೈದ್ಯರು ಮತ್ತು ತಂಡವನ್ನು ಅಭಿನಂದಿಸಿದರು. ಈ ಸಂಧರ್ಭ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ , ಮೆಡಿಕಲ್ ಸೂಪರಿಡೆಂಟ್ ದೇವೆಂದ್ರ ಕುಮಾರ್, ವೇದಿಕೆಯ ಮುಂಭಾಗ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಧರ್ಣಮ್ಮ ಉಪಸ್ಥಿತರಿದ್ದರು.
ಶಸ್ತ್ರಚಿಕಿತ್ಸೆ ಬಗ್ಗೆ ವೈದ್ಯ ಶತಾನಂದ ಅವರ ಮಾತು…!
65 ವರ್ಷದ ಧರ್ಣಮ್ಮ ಎಂಬ ವೃದ್ಧೆ ಸಹಿಸಲು ಅಸಾಧ್ಯವಾದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಉಜಿರೆಯ ಎಸ್ ಡಿ ಎಂ ಆಸ್ಪತ್ರೆ ಗೆ ಬಂದಾಗ ಬೆನ್ನುಮೂಳೆಯ ಪರಿಶೀಲನೆ ನಡೆಸಿದೆವು. ಎಂ.ಆರ್.ಐ ಮೂಲಕ ಗೆಡ್ಡೆ ಇರೋದು ಪತ್ತೆಯಾಗಿದೆ. ಡಾ.ಮಹೇಶ್ ನೇತೃತ್ವದ ತಂಡ ಆರು ಗಂಟೆಯ ಸತತ ಶಸ್ತ್ರ ಚಿಕಿತ್ಸೆಯಲ್ಲಿ ಮೊದಲ ಬಾರಿಗೆ ಎಂಡೋಸ್ಕೋಪಿಕ್ ಚಿಕಿತ್ಸೆ ಮಾಡಲಾಗಿದ್ದು, ಕೇವಲ ಒಂದು ಸೆಂಟಿಮೀಟರ್ ಛೇದನದೊಂದಿಗೆ ಮೂರು ಸೆಂಟಿಮೀಟರ್ ಗೆಡ್ಡೆಯನ್ನು ಹೊರತೆಗೆಯಲಾಗಿದೆ. ಎಂಡೋಸ್ಕೋಪಿಕ್ ಚಿಕಿತ್ಸೆ ಕನಿಷ್ಠ ರಕ್ತದ ನಷ್ಟದೊಂದಿಗೆ ಯಾವುದೇ ಅಂಗಾಂಶ ಹಾನಿಯಾಗದಂತೆ ಮಾಡಲಾಗಿದೆ.
ಸಾಮಾನ್ಯವಾಗಿ ಹಳೆಯ ವಿಧಾನದೊಂದಿಗೆ ಶಸ್ತ್ರಚಿಕಿತ್ಸೆ ನಡೆದರೆ ಹೆಚ್ಚಿನ ಗಾಯ ಮತ್ತು ವಿವಿಧ ನರಗಳಿಗೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಆದರೆ ಎಸ್ ಡಿ ಎಂ ಆಸ್ಪತ್ರೆ ಯಲ್ಲಿ ನಡೆದ ಎಂಡೋಸ್ಕೋಪಿಕ್ ನಡೆದ ಶಸ್ತ್ರ ಚಿಕಿತ್ಸೆ ಯಲ್ಲಿ ಒಂದೇ ದಿನದಲ್ಲಿ ವೃದ್ಧೆ ಮತ್ತೆ ನಡೆಯುವಂತಾಗಿದೆ .ಶಸ್ತ್ರ ಚಿಕಿತ್ಸೆ ನಡೆದ ಬಳಿಕ ಡ್ಯೂರಲ್ ಹಾನಿಯನ್ನು ಸರಿಪಡಿಸಲು ಹೊಲಿಗೆ ವಿಶ್ವದ ಯಾವ ಆಸ್ಪತ್ರೆ ಯಲ್ಲೂ ಯಶಸ್ವಿಯಾಗಿಲ್ಲ. ಆದರೆ ಎಸ್ ಡಿ ಎಂ ಆಸ್ಪತ್ರೆ ಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಹೊಲಿಗೆ ಯನ್ನು ಹಾಕಲಾಗಿದೆ ಎಂದು ಶತಾನಂದ ತಿಳಿಸಿದರು.