Fri. Jan 31st, 2025

Mangaluru: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಬಲೆಗೆ ಬಿದ್ದ ಪೋಲಿಸ್‌ ಇನ್ಸ್ಪೆಕ್ಟರ್!! – ಇನ್ಸ್ಪೆಕ್ಟರ್ ಸಹಿತ ಇಬ್ಬರ ಬಂಧನ

ಮಂಗಳೂರು:(ಜ.28) ಪೊಲೀಸ್ ಠಾಣೆಯಿಂದ ಸ್ಕೂಟರ್‌ ಬಿಡುಗಡೆಗೊಳಿಸಲು ಲಂಚ ಪಡೆದ ಆರೋಪದ ಮೇಲೆ ನಗರದ ಉತ್ತರ ಸಂಚಾರ ಪೊಲೀಸ್‌ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಷರೀಫ್‌ ಹಾಗೂ ಸಿಬ್ಬಂದಿ ಪ್ರವೀಣ್ ನಾಯ್ಕನನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಇದನ್ನೂ ಓದಿ: Mokshita Pai: ಮಕ್ಕಳ ಕಿಡ್ನಾಪ್ ಪ್ರಕರಣ

ಪೊಲೀಸರ ವಶದಲ್ಲಿದ್ದ ಸ್ಕೂಟರ್‌ ಬಿಡುಗಡೆಗೊಳಿಸಲು ನ್ಯಾಯಾಲಯವು ಆದೇಶ ಮಾಡಿತ್ತು. ಈ ಸಲುವಾಗಿ ದೂರುದಾರರು ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಷರೀಫ್ ಅವರನ್ನು ಭೇಟಿ ಮಾಡಿದ್ದರು.

ಆದ್ರೆ ಸ್ಕೂಟರ್‌ ಬಿಡುಗಡೆಗೊಳಿಸಲು 5ಸಾವಿರ ಲಂಚ ನೀಡುವಂತೆ ಷರೀಫ್‌ ಬೇಡಿಕೆ ಇಟ್ಟಿದ್ದರು. ಮೊತ್ತವನ್ನು ಕಡಿಮೆ ಮಾಡುವಂತೆ ಕೋರಿದಾಗ ಠಾಣಾ ಬರಹಗಾರರಾದ ನಾಗರತ್ನ ಅವರನ್ನು ಭೇಟಿ ಮಾಡಲು ತಿಳಿಸಿದ್ದರು.

ಆಕೆಯ ಬಳಿ ಹೋದಾಗ, ಅವಾಚ್ಯವಾಗಿ ನಿಷ್ಠುರವಾಗಿ ಮಾತನಾಡಿ 3 ಸಾವಿರ ಲಂಚ ನೀಡುವಂತೆ ಹೇಳಿದ್ದರು. ಇದರಿಂದ ಬೇಸರಗೊಂಡು ಲೋಕಾಯುಕ್ತ ಪೊಲೀಸರಲ್ಲಿ ದೂರು ನೀಡಲಾಗಿತ್ತು. ಅಂತೆಯೇ ದೂರುದಾರ ವ್ಯಕ್ತಿಯಿಂದ ಸೋಮವಾರ 3 ಸಾವಿರವನ್ನು ಪಡೆದ ತಕ್ಷಣ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *