Thu. Jan 30th, 2025

Bandaru: ಎರಡು ಕುಟುಂಬಗಳ ನಡುವೆ ಗಲಾಟೆ – ಅಕ್ರಮ ಸಂಬಂಧದ ಶಂಕೆಯೇ ಮಾರಾಮಾರಿಗೆ ಕಾರಣವಾಯಿತಾ??! – ಎರಡೂ ಕಡೆಯವರಿಗೆ ಗಂಭೀರ ಗಾಯ – ಎರಡೂ ಕಡೆಯವರೂ ಆಸ್ಪತ್ರೆಗೆ ದಾಖಲು!!

ಬಂದಾರು:(ಜ.30)ಎರಡು ಕುಟುಂಬಗಳ ನಡುವೆ ಮಾರಾಮಾರಿಯಾದ ಘಟನೆ ಬಂದಾರಿನ ಓಜಾಲಿಯಲ್ಲಿ ನಡೆದಿದೆ.

ಇದನ್ನೂ ಓದಿ: West Bengal : ಕ್ಲಾಸಿನಲ್ಲೇ ತನ್ನ ವಿದ್ಯಾರ್ಥಿಯನ್ನು ಮದುವೆಯಾದ ಪ್ರೊಫೆಸರ್

ಓಜಾಲಿಯ ಎರಡು ಕುಟುಂಬಗಳ ನಡುವೆ ಜ. 29 ರಂದು ರಾತ್ರಿ ಮಾರಾಮಾರಿ ನಡೆದಿದ್ದು, ಎರಡೂ ಕುಟುಂಬಗಳ ಸದಸ್ಯರೂ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಓಜಾಲಿನ ಎಲ್ಯಣ್ಣ ಗೌಡ ಮತ್ತು ಜಾರಪ್ಪ ಗೌಡರ ಕುಟುಂಬದ ನಡುವೆ ಇದ್ದ ವೈಮನಸ್ಸು ಮಾರಾಮಾರಿಗೆ ಕಾರಣ ಎನ್ನಲಾಗಿದೆ. ಮತ್ತೊಂದೆಡೆ, ಅಕ್ರಮ ಸಂಬಂಧದ ಶಂಕೆಯೇ ಗಲಾಟೆ ಕಾರಣ ಎನ್ನಲಾಗುತ್ತಿದೆ. ಈ ಕುರಿತು ಜ. 29 ರಂದು ಬೆಳಗ್ಗೆಯೇ ಮಾತಿನ ಚಕಮಕಿ ನಡೆದಿತ್ತು, ರಾತ್ರಿ ಅದುವೇ ಮಾರಾಮಾರಿಗೆ ಕಾರಣವಾಗಿದೆ ಎನ್ನಲಾಗಿದೆ.

ತೀವ್ರ ಗಾಯಗೊಂಡವರನ್ನು ಮಂಗಳೂರಿನ ಕೆ. ಎಂ. ಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮತ್ತೊಂದು ತಂಡ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *