Thu. Jan 30th, 2025

ಮಂಗಳೂರು(ಜ.30) ಕೊಟ್ಟಾರದಲ್ಲಿರುವ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಬಳಿ ರಣಕಾಳಿ ಹಾಗೂ ಬ್ರಹ್ಮರಾಕ್ಷಸ ಅನ್ಯಪ್ರೇತ ಉಚ್ಚಾಟನೆ ಹಿನ್ನೆಲೆ ಕೊಟ್ಟಾರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾಡದಂತೆ ಸೂಚಿಸಿ ಬ್ಯಾನರ್‌ ಅಳವಡಿಸಲಾಗಿದೆ.

ಇದನ್ನೂ ಓದಿ: ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ತಡೆಗೋಡೆ ರಚನೆ ಕಾಮಗಾರಿಗೆ 2 ಕೋಟಿ 10 ಲಕ್ಷ ಅನುದಾನ ಮಂಜೂರು – ರಕ್ಷಿತ್ ಶಿವರಾಂ

ಹೀಗಾಗಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 3 ಗಂಟೆಯವರೆಗೆ ಜನರು ಓಡಾಡದಂತೆ ಮನವಿ ಮಾಡಲಾಗಿತ್ತು. ಸದ್ಯ ಪ್ರೇತ ಉಚ್ಚಾಟನೆ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೈವ ಆರಾಧಕ ಪ್ರಜ್ವಲ್ ಹೇಳಿದ್ದೇನು?
ದೈವಸ್ಥಾನ ಜೀರ್ಣೋದ್ಧಾರ ಮಾಡುವ ಸಲುವಾಗಿ ತಾಂಬೂಲ ಪ್ರಶ್ನೆ ಕೇಳಲಾಯಿತು. ಆಗ ಈ ಪ್ರದೇಶದಲ್ಲಿ ರಾಕ್ಷಸ, ಪ್ರೇತಾತ್ಮಗಳಿರುವುದು ಕಂಡು ಬಂದಿತ್ತು. ದೈವಸ್ಥಾನದ ಜೀರ್ಣೋದ್ಧಾರಕ್ಕೂ ಮೊದಲು ಈ ಪ್ರೇತಾತ್ಮಗಳ ಉಚ್ಚಾಟನೆ ಆಗಬೇಕು ಎಂದು ಬಂದಿತ್ತು.

ಅಮಾವಾಸ್ಯೆ 12 ಗಂಟೆ ವೇಳೆಗೆ ಪ್ರೇತಾತ್ಮ ಉಚ್ಚಾಟಣೆ ನಡೆಯಲಿದೆ. ಆಗ ಸುತ್ತಮುತ್ತ ಉಚ್ಚಾಟನೆ ವಿಧಿ ವಿಧಾನ ನಡೆಯುತ್ತೆ ಎಂದು ಹೇಳಿದ್ದರು.

ಅಲ್ಲದೆ ಮಂಗಳೂರು ಪೊಲೀಸ್ ಇಲಾಖೆಗೂ ಆಯೋಜಕರು ಮನವಿ ಮಾಡಲಾಗಿತ್ತು. ಸುಮಾರು 3-4 ಕಿಮೀ ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರವನ್ನು ನಿಷೇಧಿಸಿದ್ದು, ಅಂದರೆ ಸುಮಾರು ಐದು ಗಂಟೆಗಳ ಕಾಲ ಮಂಗಳೂರಿನ ಪ್ರಮುಖ ರಸ್ತೆ ಕೊಟ್ಟಾರ ಬಂದ್ ಆಗಿತ್ತು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *