Thu. Jan 30th, 2025

Suicide: ಉಡದಾರದಿಂದ ನೇಣು ಬಿಗಿದುಕೊಂಡು 13 ರ ಬಾಲಕ ಸಾವು!

ಬೆಂಗಳೂರು:(ಜ.30) ರಾಜ್ಯ ರಾಜಧಾನಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನ‌ನಗರದಲ್ಲಿ ದುರ್ಘಟನೆಯೊಂದು ನಡೆದಿದೆ.

ಇದನ್ನೂ ಓದಿ: ರಾಯಚೂರು: ಕತ್ತು ಸೀಳಿ MSC ವಿದ್ಯಾರ್ಥಿನಿಯ ಬರ್ಬರ ಹತ್ಯೆ!!!

ಮೊಬೈಲ್ ಯಾಕೆ ಅತಿಯಾಗಿ ಬಳಸುತ್ತೀಯ ಎಂದು ಹೆತ್ತವರು ಪ್ರಶ್ನೆ ಮಾಡಿದ್ದಕ್ಕೆ ಮನನೊಂದ 13 ವರ್ಷದ ಬಾಲಕ ತಂಗಿ ಮುಂದೆಯೇ ತನ್ನ ಸೊಂಟಕ್ಕೆ ಕಟ್ಟುವ ನೂಲಿನಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಮೃತ ಬಾಲಕನನ್ನು ಧ್ರುವ (13) ಎಂದು ಗುರುತಿಸಲಾಗುದೆ. 9 ವರ್ಷದ ತಂಗಿ ಮುಂದೆಯೇ ಅಣ್ಣ ಅಳುತ್ತಲೇ ಸೊಂಟಕ್ಕೆ ಕಟ್ಟಿದ್ದ ಎರಡು ಜೋಡಿಯ ಉಡದಾರವನ್ನು ಬಿಚ್ಚಿಕೊಂಡು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಮನೆಯವರ ಮಾತು ಕೇಳದೆ ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಕಾರಣ ಅಂದು ಮನೆಯಲ್ಲಿ ಮೊಬೈಲ್ ಇಡದೇ ಬಾಲಕನ ತಂದೆ, ತಾಯಿ ತಮ್ಮೊಂದಿಗೆ ಮೊಬೈಲ್ ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಮೊಬೈಲ್ ಇಲ್ಲದ್ದರಿಂದ ಕುಪಿತಗೊಂಡ ಬಾಲಕ ಸೊಂಟದಲ್ಲಿದ್ದ ಉಡದಾರವನ್ನು ಬಿಚ್ಚಿಕೊಂಡು ಫ್ಯಾನ್‌ಗೆ ಕಟ್ಟಿ ನಂತರ ಅದನ್ನು ಕುತ್ತಿಗೆಗೆ ಬಿಗಿದುಕೊಂಡು ತಂಗಿಯ ಕಣ್ಣ ಮುಂದೆಯೇ ಸತ್ತಿದ್ದಾನೆ.

Leave a Reply

Your email address will not be published. Required fields are marked *