ಬಂಟ್ವಾಳ:(ಜ.31) ಕರಾವಳಿಯ ಗ್ರಾಮೀಣ ಭಾಗದ ಕೃಷಿ ಕುಟುಂಬದ ವಿದ್ಯಾರ್ಥಿನಿಯೋರ್ವಳು ಎಸ್.ಐ.ಆಗಿ ನೇಮಕಗೊಂಡಿದ್ದಾಳೆ.

ಇದನ್ನೂ ಓದಿ: Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಕೊಟ್ರು ಬಿಗ್ ಅಪ್ಡೇಟ್
ಮಾಣಿ ಗ್ರಾಮದ ಬದಿಗುಡ್ಡೆ ನಿವಾಸಿ ಕೃಷಿಕರಾದ ರಾಧಾಕೃಷ್ಣ ಮತ್ತು ಶಾಂತ ಶೆಟ್ಟಿಯವರ ಮೂವರು ಮಕ್ಕಳಲ್ಲಿ ಕಿರಿಯವರಾದ ಸುಶ್ಮಿತಾ ಶೆಟ್ಟಿ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯ ಪರೀಕ್ಷೆ ಬರೆದು ಉತ್ತೀರ್ಣರಾಗಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.


ಮೈಸೂರಿನಲ್ಲಿ ತರಬೇತಿಯನ್ನು ಪಡೆಯುವ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಲ್ಕಡ್ಕದಲ್ಲಿನ ಶ್ರೀರಾಮ ಶಾಲೆಯಲ್ಲಿ ಮುಗಿಸಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ.ಪದವಿಯನ್ನು ಪಡೆದು, ಮಂಗಳೂರಿನಲ್ಲಿರುವ ರೋಷನಿ ನಿಲಯ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ.

ಹಾಗೂ ಕೋಲಾರದ ಬಂಗಾರ ಪೇಟೆಯಲ್ಲಿ ಬಿ.ಎಡ್. ಶಿಕ್ಷಣವನ್ನು ಪಡೆಯುತ್ತಿರುವಾಗಲೇ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯನ್ನು ಬರೆದ ಇವರು ಉತ್ತೀರ್ಣಗೊಂಡು ನೇಮಕಗೊಂಡಿದ್ದಾರೆ. ಇವರ ಸಹೋದರ ರಾಜೇಶ್ ಶೆಟ್ಟಿ ಮಾಣಿಯಲ್ಲಿ ಸ್ವ ಉದ್ಯಮ ನಡೆಸುತ್ತಿದ್ದು, ಸಹೋದರಿ ರಶ್ಮಿತಾ ಶೆಟ್ಟಿ ಇಂಜಿನಿಯರ್ ಆಗಿರುತ್ತಾರೆ.
