ಬೆಳ್ತಂಗಡಿ:(ಜ.31) ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುರುವಾಯನಕೆರೆ ಬ್ರಾಂಚ್ ಸಮಿತಿ ಹಾಗೂ ಜುಮ್ಮಾ ಮಸೀದಿ ಗುರುವಾಯನಕೆರೆ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಕುವೆಟ್ಟು ಗ್ರಾಮದ ಪಾಣೆಜಾಲು ನಲ್ಲಿ ನಿರ್ಮಿಸಿದ ಮನೆಯನ್ನು ಬಡ ಮಹಿಳೆ ಜೋಹಾರ ಪಣೆಜಾಲು ಅವರಿಗೆ ಹಸ್ತಾಂತರ ಮಾಡಲಾಯಿತು.

ಇದನ್ನೂ ಓದಿ: ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣ
ಅಸ್ಸಯ್ಯದ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ಅವರು ದುವಾ ಆಶೀರ್ವಾದಗೈದರು. ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸದಾತ್ ಬಜತ್ತೂರು ಮನೆ ಕೀ ಯನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮನೆ ನಿರ್ಮಾಣ ಕ್ಕೆ ಸಹಕರಿಸಿದ ರಿಯಾಝ್ ಮೇಸ್ತ್ರಿ ಮದ್ದಡ್ಕ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಜುಮ್ಮಾ ಮಸೀದಿ ಗುರುವಾಯನಕೆರೆ ಖತೀಬರಾದ ಎ ಕೆ ರಝ ಅಮ್ಜದಿ, ಮಸೀದಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಹಾಜಿ, ಯಾಕೂಬ್ ಮುಸ್ಲಿಯಾರ್, ಹಾಜಿ ಅಬ್ದುಲ್ ರಹಿಮಾನ್ ಸುನ್ನತ್ ಕೆರೆ, ಪಂಚಾಯತ್ ಸದಸ್ಯರಾದ ಮುಸ್ತಾಫ ಜಿ.ಕೆರೆ,

ಸುನ್ನತ್ ಕೆರೆ ಜುಮ್ಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಹಕೀಮ್, ಕಿಲ್ಲೂರು ಜುಮ್ಮಾ ಮಸೀದಿ ಅಧ್ಯಕ್ಷರಾದ ಅಝೀಝ್ ಝುಹ್ರಿ ಉಸ್ತಾದ್, ಉಮರ್ ಮಟನ್, ನಿಸಾರ್ ಕೆ. ಪಿ, ಉಸ್ಮಾನ್ ಬಿ ಬಿ ಎಸ್, ದಾವೂದ್ ಜಿ.ಕೆ, ಕಲಂದರ್ ಬಿ. ಎಚ್, ಅಶ್ರಫ್ ಸುನ್ನತ್ ಕೆರೆ, ನಿಜಾಮ್ ಗೇರುಕಟ್ಟೆ, ಎಸ್‌ಡಿಪಿಐ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು.
