ಬೆಳ್ತಂಗಡಿ :(ಜ.31) ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಲು ಕಾರಣವಾಗಿದ್ದ ಆರೋಪಿ ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ಕೇಶವ ಪೂಜಾರಿ(43)ಗೆ ಮಂಗಳೂರು ಫೋಕ್ಸೋ ನ್ಯಾಯಾಲಯ 20 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ ಜ.28 ರಂದು ಶಿಕ್ಷೆ ಪ್ರಕಟ ಮಾಡಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 11-11-2023 ರಂದು ಫೋಕ್ಸೋ ಪ್ರಕರಣ ದಾಖಲಾಗಿತ್ತು. ಜ.28 ರಂದು ಆರೋಪಿ ಕೇಶವ ಪೂಜಾರಿ ಎಂಬಾತನಿಗೆ u/s 6 pocso 376(2)(n), 376(3) ನಲ್ಲಿ 20 ವರ್ಷ ಕಾರಾಗೃಹ ಶಿಕ್ಷೆ 50 ಸಾವಿರ ರೂಪಾಯಿ ದಂಡ ತಪ್ಪಿದ್ದಲ್ಲಿ 4 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ u/s 506 ನಲ್ಲಿ 3 ತಿಂಗಳ ಅವಧಿ ಕಾರಾಗೃಹ ಶಿಕ್ಷೆ 5 ಸಾವಿರ ರೂಪಾಯಿ ದಂಡ ತಪ್ಪಿದ್ದಲ್ಲಿ 15 ದಿನ ಕಾರಾವಾಸ ವಿಧಿಸಿ ಮಂಗಳೂರು FTSC ನ್ಯಾಯಾಲಯದ ನ್ಯಾಯಾಧೀಶರಾದ ಮನು.ಕೆ.ಎಸ್ ಅವರು ತೀರ್ಪು ನೀಡಿದ್ದಾರೆ.



ಈ ಪ್ರಕರಣವನ್ನು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೋಪಪಟ್ಟಿ ಸಲ್ಲಿಸಿದ್ದು. ಇವರಿಗೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯ ವಿಜಯ ರೈ, ಸುನಿತಾ, ಬೆನ್ನಿಚ್ಚನ್, ಚರಣ್ ರಾಜ್, ಎ.ಎಸ್.ಐ ಕುಲಜ್ಯೋತಿ ತಿಲಕ್ ರಾಜ್, ಸುನಿತಾ ತನಿಖಾ ಸಹಾಯಕರಾಗಿದ್ದು. ನ್ಯಾಯಾಲಯದ ಪೂರಕ ಸಾಕ್ಷಿಗಳನ್ನು ಧರ್ಮಸ್ಥಳ ಕೋರ್ಟ್ ಪಿಸಿ ಮೆಹಬೂಬ್ ಪಾಟೀಲ್ ನೋಡಿಕೊಂಡಿದ್ದರು. ಸರಕಾರಿ ಅಭಿಯೋಜರಾಗಿ ಬದ್ರಿನಾಥ್ ನಾಯರಿ ಸಹಕರಿಸಿದರು.
