Sun. Feb 2nd, 2025

Belthangady: ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ ಮತ್ತೆ ಮೋಸ, ಮತ್ತೊಮ್ಮೆ ಕರ್ನಾಟಕಕ್ಕೆ ಮಲತಾಯಿ ಧೋರಣೆ – ರಕ್ಷಿತ್ ಶಿವರಾಂ

ಬೆಳ್ತಂಗಡಿ:(ಫೆ.1) ಸಾಲ ಮಾಡಿಯಾದ್ರು ತುಪ್ಪ ತಿನ್ನು ಎನ್ನುವ ಹಾಗೆ ಒಟ್ಟು ಬಜೆಟ್ ನಲ್ಲಿ 24% ರಷ್ಟು ಸಾಲ 15.68 ಲಕ್ಷ ಕೋಟಿ ಸಾಲ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ.

ಇದನ್ನೂ ಓದಿ: ಉಜಿರೆ: ಎಸ್.ಡಿ.ಎಂ. ನೆನಪಿನಂಗಳದ 17ನೇ ಕಂತಿನ ಕಾರ್ಯಕ್ರಮ


ಕೇಂದ್ರ ಸರ್ಕಾರದ ಒಟ್ಟು ಸ್ವೀಕೃತಿ 31.47 ಲಕ್ಷ ಮತ್ತು ಒಟ್ಟು ತೆರಿಗೆ ಸ್ವೀಕೃತಿ 25.57 ಲಕ್ಷ ಕೋಟಿ.
ಸಾಲ ಮರುಪಾವತಿ 12.67 ಲಕ್ಷ ಕೋಟಿ ಅಂದರೆ ಬಜೆಟ್ ನ 20% ಸಾಲಕ್ಕೆ ಹೋಗುತ್ತದೆ. ಒಟ್ಟಾರೆಯಾಗಿ 11.54 ಲಕ್ಷ ಕೋಟಿ ಸಾಲ ಮಾಡಿ ಸರ್ಕಾರ ನಡೆಸಲು ಹೊರಟಿರುವ “ಸಾಲದ ಸರ್ಕಾರ”.

ಕಳೆದ ವರ್ಷದ ಬಜೆಟ್ ಗೆ ಹೋಲಿಕೆ ಮಾಡಿದರೆ ಕಾರ್ಪೊರೇಟ್ ತೆರಿಗೆ ಬಹುತೇಕ ಅಷ್ಟೇ ಇದೆ ಅಂದರೆ ಕಾರ್ಪೊರೇಟ್ ಕಂಪನಿಗಳ ಅಭಿವೃದ್ದಿ ಆಗಿಲ್ಲ ಇದು ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ.

ಕೇಂದ್ರ ಸರ್ಕಾರದಲ್ಲಿ ಕಾರ್ಪೊರೇಟ್ ಕಂಪನಿಗಳು ಕಟ್ಟುವ ತೆರಿಗೆ ಕೇವಲ 10 ಲಕ್ಷ ಕೋಟಿ ಆದರೆ ಬಡವರ ಮತ್ತು ಮಧ್ಯಮ ವರ್ಗದ ಬೆವರಿನ ಹನಿಯಿಂದ ಕಟ್ಟುತ್ತಿರುವ ಆದಾಯ ತೆರಿಗೆ 14.5 ಲಕ್ಷ ಕೋಟಿ. ಅಂದರೆ ಕಂಪೆನಿಗಳಿಗಿಂತ ಜನರೇ 5 ಲಕ್ಷ ಕೋಟಿ ತೆರಿಗೆ ಹೆಚ್ಚು ಕಟ್ಟಿದ್ದಾರೆ.

ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಬೋಬ್ಬೆ ಹೋಡಿಯುತ್ತಿದ ಕೇಂದ್ರದ ಬಿಜೆಪಿ ಸರ್ಕಾರ ಯುವಜನರ ಹಣೆಗೆ ಉಂಡೇನಾಮ ಬಳಿದು ಪಕೋಡ ಮಾಡಿ ಎಂದು ಬುಲಾವ್ ನೀಡಿದಂತಿದೆ. ಈಗ ಪ್ರತಿ ವರ್ಷ ಕೇವಲ 75 ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ನಿರ್ಮಲಮ್ಮ ತಾವೆ ಬಿಜೆಪಿಯ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ.

ಅದೇ ರೀತಿ ಪ್ರತಿ ವರ್ಷ 4 ಕೋಟಿ ಯುವಜನರಿಗೆ ಸ್ಕಿಲ್ ತರಬೇತಿ ನೀಡುತ್ತೇವೆ ಎಂದು ಬಜೆಟ್ ನಲ್ಲಿ ಘೋಷಿಸಿದ್ದಾರೆ ಹಾಗಾದರೆ 75 ಲಕ್ಷ ಯುವಜನರ ಉದ್ಯೋಗ ನೀಡಿದರೆ ಇನ್ನುಳಿದ 3.25 ಲಕ್ಷ ಯುವಕರು ತರಬೇತಿ ಪಡೆದು ಏನು ಪಕೋಡ ಮಾರಬೇಕಾ?

ಭಾರತ ಉದ್ಯೋಗ ವರದಿ 2024 ಪ್ರಕಾರ ಮುಂದಿನ ಒಂದು ದಶಕ ಅವಧಿಯಲ್ಲಿ ಭಾರತ ಕೇವಲ 70-80 ಲಕ್ಷ ಜನರು ಹೊಸದಾಗಿ ಉದ್ಯೋಗ ಸೃಷ್ಟಿಸಬಹುದು ಎಂದು ತಿಳಿಸಿದ್ದು ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಹಸಿ ಸುಳ್ಳನ್ನು ಬಟಾ ಬಯಲು ಮಾಡಿದೆ.

ಲೋಕಸಭಾ ಚುನಾವಣೆಯಲ್ಲಿ ಸನ್ಮಾನ್ಯ ಮೋದಿಯವರು ದೇಶದ ಬೆಳವಣಿಗೆ ಮತ್ತು ಉದ್ಯೋಗ ನಷ್ಟವನ್ನು ಬಗೆಹರಿಸಲು ಹೆಚ್ಚಿನ ವೆಚ್ಚ ಮಾಡಲಾಗುವುದು ಎಂದು ಹೇಳಿ ಈಗ ಕೇಂದ್ರ ಸರ್ಕಾರದ ವೆಚ್ಚ 4.4%ಕ್ಕೆ ಕುಸಿದಿದ್ದು ಕಳೆದ ವರ್ಷ 14% ರಷ್ಟಿತ್ತು ಇದರಿಂದ ಜನರು ಬಳಿ ಹಣವಿಲ್ಲದೆ ವಸ್ತುಗಳ ಖರೀದಿಯಲ್ಲಿ ಕಡಿತವಾಗಿದೆ.

ಈ ಬಜೆಟ್ ನ ಮುಖಾಂತರ ಬಯಲಾದ ಇನ್ನಷ್ಟು ಸತ್ಯಗಳು, ಕೇಂದ್ರ ಬಿಜೆಪಿ ಸರ್ಕಾರ ಈಡೇರಿಸದ ಈ ಹಿಂದಿನ ಭರವಸೆಗಳು:

  • ರೈತರ ಆದಾಯ ದ್ವಿಗುಣ ಆಗಲಿಲ್ಲ.
  • ಗುಡಿಸಲು ಮುಕ್ತ ಭಾರತ ಆಗಲಿಲ್ಲ.
  • 2 ಕೋಟಿ ಉದ್ಯೋಗ ಸೃಷ್ಟಿ ಆಗಲಿಲ್ಲ.
    •370 ಕಾಯಿದೆ ಮೂಲಕ ವಿಷೇಶ ಸ್ಥಾನಮಾನ ನೀಡಿದ ಜಮ್ಮು ಕಾಶ್ಮೀರ ಉಗ್ರಗಾಮಿ ಮುಕ್ತ ರಾಜ್ಯವಾಗಲಿಲ್ಲ.
    •ಪ್ರತೀ ಮನೆಗೂ ಕರೆಂಟ್ ಬರಲಿಲ್ಲ.

ಇದು ಅಪ್ಪಟ ರೈತ ವಿರೋಧಿ , ಯುವಕರು ಹಾಗೂ ಮಧ್ಯಮ ವರ್ಗದವರ ವಿರೋಧಿ ಬಜೆಟ್ . ಬಡತನ ನಿರ್ಮೂಲನೆ ಉದ್ಯೋಗ ಸೃಷ್ಟಿಸುವ ಬಗ್ಗೆ ಯಾವುದೆ ಯೋಜನೆ ಇಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *