Sun. Feb 2nd, 2025

Davangere: ಹೆಣ್ಮಕ್ಕಳನ್ನು ಪುಸಲಾಯಿಸಿ ಕಾಮದ ತೀಟೆ ತೀರಿಸಿಕೊಳ್ಳುತ್ತಿದ್ದ ಮೆಡಿಕಲ್​ ಶಾಪ್ ಮಾಲೀಕ!!! – ಕಾಮಪ್ರಸಂಗದ ವಿಡಿಯೋ ರೆಕಾರ್ಡ್‌ ಮಾಡುತ್ತಿದ್ದ ಕೀಚಕ – ಕಾಮುಕ ಅರೆಸ್ಟ್!!

ದಾವಣಗೆರೆ:(ಫೆ.1) ಮೆಡಿಕಲ್​ ಶಾಪ್ ಬಂದ ಮಹಿಳೆ ಹಾಗೂ ಬಾಲಕಿಯನ್ನು ಪುಸಲಾಯಿಸಿ ತನ್ನ ಕಾಮದತೀಟೆ ತೀರಿಸಿಕೊಂಡಿದ್ದಾನೆ. ಸಾಲದಕ್ಕೆ ಅವರಿಗೆ ಗೊತ್ತಾಗದಂತೆ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿಕೊಂಡಿದ್ದಾನೆ. ಇದೀಗ ಅಶ್ಲೀಲ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ಈ ಪ್ರಕರಣ ಬೆಳಕಿಗೆ ಬಂದಿದೆ. ಆತನ ಹೆಸರು ಅಮ್ಜಾದ್ . ಈ ಕಾಮುಕನ ಅಟ್ಟಹಾಸಕ್ಕೆ ಮಹಿಳೆಯರ ಮಾನ ಮರ್ಯಾದೆ ಹರಾಜು ಆಗಿದೆ. ಕೀಚಕನ ಕಿರಾತಕ ಕೃತ್ಯಕ್ಕೆ ಹಲವಾರು ಮಹಿಳೆಯರು ನೋವು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ಜನತೆಯ ನಾಡಿ ಮಿಡಿತ ಅರಿತು ವಿಕಸಿತ ಭಾರತದ ಬಜೆಟ್ ಮಂಡನೆ – ಹರೀಶ್ ಪೂಂಜ‌

ಈ ವಿಕೃತ ಕಾಮಿ ಅಮ್ಜಾದ್ ದಾವಣಗೆರೆ ನಗರದ ದೇವರಾಜ್ ಅರಸು ಬಡಾವಣೆಯ ಎ ಬ್ಲಾಕ್ ನಿವಾಸಿಯಾಗಿದ್ದು, ಮೆಡಿಕಲ್ ಸ್ಟೋರ್ ಗೆ ಬರುವ, ಕ್ಲಿನಿಕ್ ಗೆ ಬರುವ ಮಹಿಳೆಯರ‌ನ್ನು ಟಾರ್ಗೆಟ್ ಮಾಡುತ್ತಿದ್ದ. ಹೀಗೆ ಒಂದು ಸಲ ಶಾಲಾ ಬಾಲಕಿಯನ್ನು ಪುಸಲಾಯಿಸಿ ಹೀನ ಕೃತ್ಯಕ್ಕೆ ಬಳಸಿಕೊಂಡು ದೌರ್ಜನ್ಯ ಎಸಗಿದ್ದಾನೆ. ಕೈಮುಗಿದು ಅತ್ತು ಕರೆದ್ರು ಬಿಟ್ಟಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆ ಚನ್ನಗಿರಿ ಪಟ್ಟಣದಿಂದಲೇ ನಾಪತ್ತೆಯಾದ ಕಿರಾತಕ ಮೆಡಿಕಲ್ ಸ್ಟೋರ್ ಮಾಲೀಕನ ಹೀನ ಕೃತ್ಯಕ್ಕೆ ಅದೆಷ್ಟೋ ಮಹಿಳೆಯರ ಮಾನ ಹರಾಜು ಆಗಿದೆ. ಕೀಚಕನ ಮೊಬೈಲ್ ನಲ್ಲಿ 60ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.

ಈತ ತನ್ನ ಸರಸ ಸಲ್ಲಾಪವನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು ಬಳಿಕ ಅವುಗಳನ್ನು ಲ್ಯಾಪ್ ಟಾಪ್ ಗೆ ಹಾಕಿಕೊಂಡು ವೀಕ್ಷಿಸಿ ವಿಕೃತ ಖುಷಿ ಪಡುತ್ತಿದ್ದ. ಇನ್ನು ಈತನ ನೀಚತನ ಖಂಡಿಸಿ ಕೆಲ ಸಂಘಟನೆಗಳಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ಮಹಿಳೆಯರಿಗೆ ಗೊತ್ತಿಲ್ಲದೆ ವಿಡಿಯೋ ಮಾಡಿಕೊಂಡು ಅವರ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದ. ಬಾಲಕಿಯನ್ನು ಯಾವುದೋ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಮಾಡಿದ್ದಲ್ಲದೆ ವೀಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಹಿನ್ನೆಲೆ ಸಿ ಇ ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ 67, 67(ಎ), 67(ಬಿ) ಐಟಿ ಆಕ್ಟ್ ಮತ್ತು ಕಲಂ 77 ಹಾಗೂ ಕಲಂ 4, 6, 14, 15 ಪೋಕ್ಸೋ ಆಕ್ಟ್ 2012 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಾಲಕಿಯರನ್ನು ತಮ್ಮ ಕಾಮದಾಹಕ್ಕೆ ಬಳಸಿಕೊಂಡಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ.

Leave a Reply

Your email address will not be published. Required fields are marked *