Sun. Feb 2nd, 2025

Kerala: ಪ್ರಿಯಕರನಿಂದ ಲೈಂಗಿಕ ದೌರ್ಜನ್ಯ – 19 ವರ್ಷದ ಯುವತಿ ಸಾವು!!

ಕೇರಳ:(ಫೆ.1) ಕೆಲವು ದಿನಗಳ ಹಿಂದೆ ತನ್ನ ನಿವಾಸದಲ್ಲಿ ತನ್ನ ಪ್ರಿಯಕರನಿಂದ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆಗೊಳಗಾದ 19 ವರ್ಷದ ಯುವತಿ ಅನುಭವಿಸಿದ ಗಾಯಗಳಿಂದ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Agriculture Budget 2025: ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಪ್ರಕಟಿಸಿದ ನಿರ್ಮಲಾ ಸೀತಾರಾಮನ್ !!


ಫೋಕ್ಸೊ ಪ್ರಕರಣದಿಂದ ಬದುಕುಳಿದ ಬಾಲಕಿ ಸೋಮವಾರ ಚೊಟ್ಟಾನಿಕ್ಕರದಲ್ಲಿರುವ ತನ್ನ ಮನೆಯಲ್ಲಿ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅದೇ ದಿನ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಬಾಲಕಿ ಮಧ್ಯಾಹ್ನ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಘಟನಾ ಸಂಬಂಧ 20ವರ್ಷದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ವಿಚಾರಣೆ ಮತ್ತು ಮರಣೋತ್ತರ ಪರೀಕ್ಷೆ ಮುಗಿದ ನಂತರ ಮತ್ತು ಸಂಬಂಧಿತ ವೈದ್ಯರ ಹೇಳಿಕೆಯನ್ನು ದಾಖಲಿಸಿದ ನಂತರ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬಹುದು ಎಂದು ಚೊಟ್ಟಾನಿಕ್ಕರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

Leave a Reply

Your email address will not be published. Required fields are marked *