Mon. Feb 3rd, 2025

Puttur: ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ – ಕಾಮೆಂಟ್ಸ್ ನಲ್ಲಿ ಪತ್ನಿಯ ಕಳ್ಳಾಟ ಬಯಲು – ಅಷ್ಟಕ್ಕೂ ಆ ಕಾಮೆಂಟ್‌ ನಲ್ಲಿ ಇದ್ದ ರಹಸ್ಯವೇನು?!

ಪುತ್ತೂರು:(ಫೆ.1) ಯುವ ಬ್ಯಾಂಕ್‌ ಉದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದು ಅಚ್ಚರಿಯ ವಿಷಯಗಳಿಗೆ ಕಾರಣ ಉಂಟು ಮಾಡಿದೆ.

ಶಿವಚಂದ್ರನ್‌ ಎಂಬಾತ ಡಾಕ್ಟರ್‌ ನಿಶಾಂತಿ ಎಂಬಾಕೆಯನ್ನು ಮದುವೆಯಾದ ಸಂಭ್ರಮದಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಕಾಮೆಂಟ್‌ ಬಾಕ್ಸ್‌ನಲ್ಲಿ ಬಂದ ಪ್ರತಿಕ್ರಿಯೆ ನೋಡಿ ಆತನಿಗೆ ಶಾಕ್‌ ಆಗಿದೆ.

ಇದನ್ನೂ ಓದಿ: ಸುರತ್ಕಲ್‌ : ಸವಾರನ ನಿಯಂತ್ರಣ ತಪ್ಪಿ ಲಾರಿಯಡಿಗೆ ಬಿದ್ದ ಬೈಕ್‌

ಪುತ್ತೂರಿನ ನೆಪೋಲಿಯನ್‌ ಎಂಬ ವ್ಯಕ್ತಿ ಫೋಟೋದಲ್ಲಿರುವ ಮಹಿಳೆ ನಿಶಾಂತಿ ಅಲ್ಲ, ನನ್ನ ಹೆಂಡತಿ ಮೀರಾ ಎಂದು ಕಾಮೆಂಟ್‌ ಮಾಡಿದ್ದರು. 2017 ರಲ್ಲಿ ಮದುವೆಯಾಗಿದ್ದ ಇವರು, ಒಂದು ವರ್ಷದ ನಂತರ ಬೆಲೆಬಾಳುವ ವಸ್ತುಗಳನ್ನು ಕದ್ದು ಈಕೆ ಪರಾರಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಶಿವಚಂದ್ರನ್‌ ಈ ಕಮೆಂಟ್‌ ಓದಿದ ನಂತರ ಕಡಲೂರಿನ ಎನ್.ರಾಜಾ ಎಂಬ ಮತ್ತೊಬ್ಬ ವ್ಯಕ್ತಿ ಕಮೆಂಟ್‌ ಮಾಡಿ, ಆ ಮಹಿಳೆ ತನ್ನ ಹೆಂಡತಿ ಎಂದು ಹೇಳಿದ್ದಾರೆ.

ಈ ಕಮೆಂಟ್‌ಗಳನ್ನು ಓದಿ ದಿಗ್ಭ್ರಮೆಗೊಂಡ ಶಿವಚಂದ್ರನ್‌ ತನ್ನ ಹೆಂಡಿ ಜೊತೆ ಪೊಲೀಸ್‌ ಠಾಣೆಗೆ ತೆರಳಿ ಸಾಮಾಜಿಕ ಮಾಧ್ಯಮದ ಕಮೆಂಟ್‌ಗಳನ್ನು ಸಾಕ್ಷಿಯಾಗಿ ಪೊಲೀಸರಿಗೆ ನೀಡಿದ್ದಾರೆ.

ವಿಚಾರಣೆಯ ವೇಳೆ, ಮಹಿಳೆ ತನ್ನ ನಿಜವಾದ ಹೆಸರು ನಿಶಾಂತಿ ಅಥವಾ ಮೀರಾ ಅಲ್ಲ ಬದಲಿಗೆ ಲಕ್ಷ್ಮೀ ಎಂದು ಹೇಳಿದ್ದಾಳೆ. ಈ ಘಟನೆಯಲ್ಲಿ ಉಲ್ಲೇಖ ಮಾಡಲಾದ ಮೂರು ವ್ಯಕ್ತಿಗಳನ್ನು ಹೊರತುಪಡಿಸಿ ಮತ್ತೊಬ್ಬ ಪತಿಯನ್ನೂ ಈಕೆ ಹೊಂದಿರುವುದಾಗಿ ಪೊಲೀಸರಲ್ಲಿ ಹೇಳಿದ್ದಾಳೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು