Sun. Feb 2nd, 2025

Viral Video: ಕುಂಭಮೇಳದಲ್ಲಿ ಟವೆಲ್ ಹುಡುಗಿಯ ವಿಚಿತ್ರ ವಿಡಿಯೋ ವೈರಲ್!!!

Viral Video:(ಫೆ.1) ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭಾರತದ ಅತ್ಯಂತ ಪವಿತ್ರ ಕಾರ್ಯಕ್ರಮವಾದ ಮಹಾಕುಂಭದಲ್ಲಿ ಯುವತಿಯೊಬ್ಬಳು ಟವೆಲ್ ಸುತ್ತಿಕೊಂಡು ಸ್ನಾನ ಮಾಡಲು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: Union Budget 2025: ಎಸ್ ಸಿ /ಎಸ್ ಟಿ , ಮಹಿಳಾ ಉದ್ಯಮಿಗಳಿಗೆ ಗುಡ್‌ ನ್ಯೂಸ್‌ ನೀಡಿದ ಸರ್ಕಾರ!!

ಸಂಗಮದ ಪವಿತ್ರ ನೀರಿನಲ್ಲಿ ಸ್ನಾನ ಮಾಡಲು ಜನರು ದೂರದೂರುಗಳಿಂದ ಬರುತ್ತಿದ್ದಾರೆ. ಆದರೆ, ಈ ಮಧ್ಯೆ ಯುವತಿಯೊಬ್ಬಳು ಕೇವಲ ಟವೆಲ್ ಸುತ್ತಿಕೊಂಡು ಜಾಲಿಯಾಗಿ ಸ್ನಾನ ಮಾಡಲು ಹೋಗುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಈ ವಿಡಿಯೋದಲ್ಲಿ ಬಿಳಿ ಬಣ್ಣದ ಟವೆಲ್ ಸುತ್ತಿಕೊಂಡ ಯುವತಿ ಸಂಗಮದ ಕಡೆಗೆ ನಡೆಯುತ್ತಿದ್ದಾಳೆ. ನಂತರ ಪವಿತ್ರ ಸ್ನಾನದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಆಕೆಯ ನಡವಳಿಕೆ ವಿವಾದಕ್ಕೆ ಕಾರಣವಾಗಿದೆ.

ಇದೀಗ ಯುವತಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಯುವತಿ ವಿರುದ್ಧ ಭಾರೀ ಆಕ್ರೋಶ ಭುಗಿಲೆದ್ದಿದೆ.

Leave a Reply

Your email address will not be published. Required fields are marked *