ಬೆಳ್ತಂಗಡಿ:(ಫೆ.3) ಯುವ ಸಿರಿ ಕಾರ್ಯಕ್ರಮದಡಿ 1000ಕ್ಕೂ ಹೆಚ್ಚು ಯುವಕ -ಯುವತಿಯರು ಅನಂತೋಡಿಯ ಗದ್ದೆಯಲ್ಲಿ ಏಕಕಾಲದಲ್ಲಿ ಭತ್ತ ಕಟಾವು ಮಾಡಲಿದ್ದಾರೆ ಎಂದು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಮೋಹನ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Bengaluru: ವಿಧವೆ ಎಂದು ಬಾಳು ನೀಡಿದ ಪೋಲಿಸ್ ಕಾನ್ಸ್ಟೇಬಲ್
ಫೆಬ್ರವರಿ 9ರಂದು ನಡೆಯುವ ಭತ್ತ ಕಟಾವು ಐತಿಹಾಸಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅನಂತೋಡಿಯ ಅನಂತ ಪದ್ಮನಾಭ ದೇವಸ್ಥಾನದ ಸನ್ನಿಧಾನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಕ್ಟೋಬರ್ 20ರಂದು ಏಕಕಾಲದಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭತ್ತ ನಾಟಿ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದೆವು. ಈಗ ಉತ್ತಮ ರೀತಿಯಲ್ಲಿ ಭತ್ತ ಬೆಳೆದು ನಿಂತಿದೆ. ಫಸಲಿಗೆ ಬಂದಿರುವ ಭತ್ತವನ್ನು ಯುವ ಜನತೆಯೆ ಕಟಾವು ಮಾಡಲಿದ್ದಾರೆ, 1000ಕ್ಕೂ ಹೆಚ್ಚು ಯುವ ರೈತರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದರು.


ಯುವಕ – ಯುವತಿಯರಲ್ಲಿ ಕೃಷಿ ಬಗ್ಗೆ ಆಸಕ್ತಿ, ಅರಿವು ಮೂಡಿಸುವ ನಿಟ್ಟಿನಲ್ಲಿ ಯುವ ಸಿರಿ ಕಾರ್ಯಕ್ರಮವನ್ನು ಆಯೋಜಿಸಿದೆವು ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರು ಶ್ರೀನಿವಾಸ್ ಗೌಡ ಬೆಳಾಲು , ಅರ್ಚಕರು, ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಉಪಸ್ಥಿತರಿದ್ದರು.
2024ರ ಅಕ್ಟೋಬರ್ 20ರಂದು ಇತಿಹಾಸ ನಿರ್ಮಾಣವಾಗಿತ್ತು..!
ಬೆಳಾಲಿನ ಅನಂತೋಡಿಯ ಅನಂತಪದ್ಮನಾಭ ದೇವಸ್ಥಾನದ ಬಳಿ ಇರುವ ಗದ್ದೆಯಲ್ಲಿ 2024ರ ಅಕ್ಟೋಬರ್ 20ರಂದು ಇತಿಹಾಸ ನಿರ್ಮಾಣವಾಗಿತ್ತು. 700ಕ್ಕೂ ಹೆಚ್ಚು ಯುವ ರೈತರು ಏಕಕಾಲದಲ್ಲಿ ಕೃಷಿಯ ಸಾಂಪ್ರದಾಯಿಕ ಉಡುಗೆ ತೊಟ್ಟು ನೇಜಿ ನಾಟಿಯನ್ನು ಮಾಡಿದ್ದರು. ಸುಮಾರು 5 ಎಕರೆ ಗದ್ದೆಯಲ್ಲಿ ಹಾಡು ಹೇಳುತ್ತಾ ಭತ್ತದ ನಾಟಿ ಮಾಡಿದ್ದರು. ಇದಕ್ಕೂ ಮುನ್ನ ಭತ್ತ ಕೃಷಿಯ ಉಳುಮೆ, ಬೀಜ ಬಿತ್ತನೆ, ಕಳೆ ತೆಗೆಯೋದು, ಪುಣಿ ಕಟ್ಟುವ ಕಾರ್ಯ ಹೀಗೆ ಹಲವಾರು ಕೃಷಿ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
