Mon. Feb 3rd, 2025

Sonu Nigam: ಆಸ್ಪತ್ರೆ ಸೇರಿದ ಸೋನು ನಿಗಮ್ – ಅಷ್ಟಕ್ಕೂ ಕಾನ್ಸರ್ಟ್ ನಲ್ಲಿ ಆಗಿದ್ದೇನು?!! – ಸೋನು ನಿಗಮ್‌ ವಿಡಿಯೋದಲ್ಲಿ ಹೇಳಿದ್ದೇನು?!

Sonu Nigam: (ಫೆ.3) ಭಾರತದ ಖ್ಯಾತ ಗಾಯಕರಲ್ಲಿ ಸೋನು ನಿಗಮ್ ಕೂಡ ಹೌದು. ಅವರು ಕನ್ನಡದ ಮಗ ಎನಿಸಿಕೊಂಡಿದ್ದಾರೆ. ‘ಕಳೆದ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಎಂಬ ಭಾವನೆ ನನ್ನದು’ ಎಂದು ಕೂಡ ಅವರು ಹೇಳಿಕೊಂಡಿದ್ದು ಇದೆ. ಈಗ ಸೋನು ನಿಗಮ್ ಅವರಿಗೆ ತೀವ್ರ ಬೆನ್ನು ನೋವು ಕಾಣಿಸಿದೆ. ಲೈವ್ ಪರ್ಫಾರ್ಮೆನ್ಸ್ ವೇಳೆ ಈ ನೋವು ಹೆಚ್ಚಾಗಿದೆ. ಆದಾಗ್ಯೂ ಅದನ್ನು ತಡೆದಿಟ್ಟುಕೊಂಡು ಪರ್ಫಾರ್ಮೆನ್ಸ್ ಮುಂದುವರಿಸಿದ್ದಾರೆ. ಆ ಬಳಿಕ ಅವರು ಆಸ್ಪತ್ರೆ ಸೇರಿದ್ದಾರೆ. ಈ ಸಂದರ್ಭದ ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಳೆಕೋಟೆ ಬೆಳ್ತಂಗಡಿ, ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ (ನಿ) ಬೆಳ್ತಂಗಡಿ

ಸೋನು ನಿಗಮ್ ಅವರು ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿದವರು. ತಮ್ಮದೇ ಬ್ಯಾಂಡ್ ಹೊಂದಿರೋ ಅವರು ಕಾನ್ಸರ್ಟ್​​ಗಳನ್ನು ನೀಡುತ್ತಾ ಇರುತ್ತಾರೆ. ಇತ್ತೀಚೆಗೆ ಪರ್ಫಾರ್ಮೆನ್ಸ್ ನೀಡುವಾಗ ಅವರಿಗೆ ಸಮಸ್ಯೆ ಆಗಿದೆ. ಆದರೆ, ಅದನ್ನು ಅದಮಿಟ್ಟುಕೊಂಡು ಹಾಡು ಹೇಳಿ ಜನರನ್ನು ರಂಜಿಸಿದ್ದಾರೆ. ಆ ಬಳಿಕ ಏನಾಯಿತು ಎಂಬುದನ್ನು ಅವರು ವಿಡಿಯೋ ಮೂಲಕ ವಿವರಿಸಿದ್ದಾರೆ.

https://www.instagram.com/reel/DFkoY8FB106/?utm_source=ig_web_button_share_sheet

ಸೋನು ನಿಗಮ್ ಅವರು ಆಸ್ಪತ್ರೆಯಲ್ಲಿ ಮಲಗಿದ್ದು, ಏನಾಯಿತು ಎಂಬುದನ್ನು ವಿವರಿಸಿದ್ದಾರೆ. ‘ನನ್ನ ಜೀವನದ ಅತ್ಯಂತ ಕಷ್ಟದ ದಿನ. ನಾನು ಹಾಡು ಹೇಳುತ್ತಾ, ವೇದಿಕೆ ಮೇಲೆಲ್ಲ ಓಡಾಡುತ್ತಾ ಇದ್ದೆ. ಆಗ ನೋವು ಕಾಣಿಸಿಕೊಂಡಿತು. ಆದರೆ, ಹೇಗೋ ಮ್ಯಾನೇಜ್ ಮಾಡಿದೆ. ಜನರು ನನ್ನಿಂದ ಎಷ್ಟನ್ನು ನಿರೀಕ್ಷಿಸುತ್ತಾರೋ ಅದಕ್ಕಿಂತ ಕಡಿಮೆ ಕೊಡಲು ನನಗೆ ಇಷ್ಟ ಇಲ್ಲ’ ಎಂದು ಅವರು ಹೇಳಿದ್ದಾರೆ.

‘ಅತಿಯಾದ ನೋವು ಕಾಣಿಸಿತ್ತು. ನನ್ನ ಬೆನ್ನು ಹುರಿಗೆ ಯಾರೋ ಇಂಜೆಕ್ಷನ್ ಸೂಜಿ ಇಟ್ಟಿದ್ದಾರೆ ಅನಿಸುತ್ತಿತ್ತು. ಸ್ವಲ್ಪ ಅಲ್ಲಾಡಿದರೂ ನೋವು ಕಿತ್ತು ಬರುತ್ತಿತ್ತು’ ಎಂದು ಅವರು ಹೇಳಿರೋ ಅವರು ವಿಡಿಯೋ ಕ್ಯಾಪ್ಶನ್​ನಲ್ಲಿ ‘ರಾತ್ರಿ ಸರಸ್ವತಿ ನನ್ನ ಕೈ ಹಿಡಿದರು’ ಎಂದಿದ್ದಾರೆ.

ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಸರಸ್ವತಿ ತಮ್ಮ ನೆಚ್ಚಿನ ಮಗುವ ಕೈ ಹಿಡಿಯಲೇಬೇಕಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಬೇಗ ಚೇತರಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ. ನಿಮ್ಮ ನೋವನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಹೇಳಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು