ಉಜಿರೆ :(ಫೆ.3) ಸಂಗಮ ಕ್ಷೇತ್ರ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನಕ್ಕೆ ನೂತನ ಪುಷ್ಪರಥ ಆಗಮಿಸಿದೆ. ನೂತನ ಪುಷ್ಪ ರಥದ ಸಮರ್ಪಣೆಯ ಶೋಭಾಯಾತ್ರೆಗೆ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಮುಂಭಾಗ ಚಾಲನೆ ದೊರಕಿತು.
ಇದನ್ನೂ ಓದಿ: ಹೆಂಡ್ತಿಗಾಗಿ ಕಿಡ್ನಿ ಮಾರಿದ ಗಂಡ
ನೂತನ ಪುಷ್ಪ ರಥದ ಸಮರ್ಪಣಾ ಶೋಭಾಯಾತ್ರೆಗೆ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಶಿವನ ಸ್ವರೂಪಿಯಾಗಿರುವ ಸದಾಶಿವ ದೇವರನ್ನು ರಥದಲ್ಲಿ ಕೂರಿಸುವ ಸೌಭಾಗ್ಯ ನಮಗೆ ಸಿಕ್ಕಿದೆ. ಸದಾಶಿವನನ್ನು ಪೂಜಿಸಿದರೆ ಎಲ್ಲಾ ಕಷ್ಟಗಳು ದೂರವಾಗುತ್ತದೆ.
ಇಂತಹ ಶೋಭಾಯಾತ್ರೆಯಲ್ಲಿ ಭಾಗಿಯಾಗುವ ಪುಣ್ಯ ನಮ್ಮ ಪಾಲಾಗಿದೆ ಎಂದರು. ಈ ವೇಳೆ ಜನಾರ್ದನ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ಲಕ್ಷ್ಮೀ ಇಂಡಸ್ಟ್ರೀಸ್ ನ ಮಾಲೀಕರಾದ ಮೋಹನ್ ಕುಮಾರ್, ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ರವಿ ಭಟ್ ಪಜಿರಡ್ಕ, ಊರಿನ ಸಮಸ್ತರು ಜೊತೆಗಿದ್ದರು.
ಪುಷ್ಪ ರಥಕ್ಕೆ ಭವ್ಯ ಸ್ವಾಗತ..!
ಪುಷ್ಪ ರಥ ಸ್ವಾಗತಕ್ಕೆ ಇಡೀ ಕಲ್ಮಂಜ ಗ್ರಾಮವೇ ಕಾದು ಕುಳಿದಿತ್ತು. ಮಹಿಳೆಯರು ಕಲಶ ಹಿಡಿದು ರಥವನ್ನು ಸ್ವಾಗತಿಸಿದರು. ಶೋಭಾಯಾತ್ರೆಯಲ್ಲಿ ಕುಣಿತ ಭಜನೆ, ದೇವರ ಸಂಕೀರ್ತನ, ಚೆಂಡೆಯೊಂದಿಗೆ ಸ್ವಾಗತಿಸಲಾಯಿತು. ರಥವನ್ನು ಮುಟ್ಟಿ ಅನೇಕ ಭಕ್ತರು ತಮ್ಮ ಭಕ್ತಿ-ಭಾವವನ್ನು ತೋರಿದರು.
ಜಯರಾಮ್ ರಾವ್ ಹಾಗೂ ಅವರ ಕುಟುಂಬಸ್ಥರು ರಥವನ್ನು ನೀಡಿದ್ದಾರೆ.