Mon. Feb 3rd, 2025

Vijayapura: ಕುವೈತ್​​ನಲ್ಲಿ ಅರಳಿದ ಪ್ರೀತಿ ವಿಜಯಪುರದಲ್ಲಿ ಅಂತ್ಯ – ಆಂಧ್ರ ಬೆಡಗಿಯೊಂದಿಗೆ ಮಜಾ ಮಾಡಿ ಮೋಸ ಮಾಡಿದ ಆರೀಫ್!!!

ವಿಜಯಪುರ (ಫೆ.03): ಪ್ರೀತಿ, ಪ್ರೇಮ ಅಂತಾ ಹೆತ್ತ ತಂದೆ ತಾಯಿ, ಅಣ್ಣ ತಮ್ಮಂದಿರು, ಅಕ್ಕ ತಂಗಿಯರನ್ನ ಹಾಗೂ ಸಂಬಂಧಿಕರನ್ನು ದೂರ ಮಾಡಿ ಬಿಡುವ ಪ್ರಕರಣಗಳನ್ನು ನಿತ್ಯ ನೋಡುತ್ತೇವೆ. ಮನಸಾರೆ ಪ್ರೀತಿಸಿದ ಯುವಕ ಒಳ್ಳೆಯವನಾದರೆ ಎಲ್ಲವೂ ಸರಿ. ಇಲ್ಲವಾದರೆ ಪ್ರೀತಿ ಪ್ರೇಮವೆಂದು ಎಲ್ಲವನ್ನೂ ತ್ಯಜಿಸಿ ಬಂದ ಯುವತಿಯ ಕಥೆ ಏನಾಗಬೇಡಾ? ಇದೀಗ ಯುವಕನನ್ನೇ ನಂಬಿ ದೂರದ ಕುವೈತ್​ನಿಂದ ಬಂದಿದ್ದ ಆಂಧ್ರ ಪ್ರದೇಶದ ಮೂಲದ ಯುವತಿಯೋರ್ವಳ ಪಾಲಿಗೆ ಆಕೆ ನಂಬಿದ್ದ ಪ್ರೀತಿಯೇ ಮುಳ್ಳಾಗಿದೆ.

ಇದನ್ನೂ ಓದಿ: ಮಂಗಳೂರು: ಹಲವು ಕೇಸ್‌ ನಲ್ಲಿ ಪೋಲಿಸರಿಗೆ ಬೇಕಾಗಿದ್ದ ಆರೋಪಿ ಭರತ್‌ ಶೆಟ್ಟಿ ಅರೆಸ್ಟ್!!

ಮದುವೆಯಾಗಿ 20 ದಿನದಲ್ಲೇ ತಲಾಕ್:
ಕೆಲಸಕ್ಕೆಂದು ವಿಜಯಪುರದ ಯುವಕ ಆರೀಫ್ ಕುವೈತ್​ಗೆ ತೆರಳಿದ್ದ. ಆಂಧ್ರ ಪ್ರದೇಶದ ಚಿತ್ತಾಪುರ ಜಿಲ್ಲೆಯ ಬೆಡಗಿ ಶಾಹೀನ ಕೂಡ ಅಲ್ಲೇ ಕೆಲಸಕ್ಕೆ ಬಂದಿದ್ದಳು. ಶಾಹೀನ ಕಳೆದ ನಾಲ್ಕು ವರ್ಷದ ಹಿಂದೆ ದುಬೈನ್ ಕತಾರ್‌ ನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಆರೀಫ್ ಕೂಡ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲಿ ಇಬ್ಬರಿಗೂ ಪರಿಚಯವಾಗಿ ನಂತರ ಪ್ರೇಮಾಂಕುರವಾಗಿ ಮೂರು ವರ್ಷ ಒಟ್ಟಿಗೆ ಸಂಸಾರ ನಡೆಸಿದ್ದಾರೆ.

ನಂತರ ಕರ್ನಾಟಕಕ್ಕೆ ಸ್ವಗ್ರಾಮಕ್ಕೆ ತೆರಳಿ ಸೆಟ್ಲ್ ಆಗೋಣ ಅಂತಾ ಹೇಳಿ ಆರೀಫ್ ತಾಳಿಕೊಟೆಗೆ ಶಾಹೀನಳನ್ನ ಕರೆ ತಂದಿದ್ದಾನೆ. ನಂತರ ಆರೀಫ್ ಕುಟುಂಬಸ್ಥರ ಸಮ್ಮುಖದಲ್ಲಿ ಕಳೆದ ತಿಂಗಳು ಜನವರಿ 9 ರಂದು ಮುಸ್ಲಿಂ ಪದ್ದತಿ ಪ್ರಕಾರ ನಿಖಾಃ ಮಾಡಿಕೊಂಡಿದ್ದಾರೆ. ಆದರೆ ಮದುವೆಯಾದ 20 ದಿನದಲ್ಲೇ ಆರೀಫ್ ಹಾಗೂ ಕುಟುಂಬಸ್ಥರು ತಲಾಕ್ ಕೊಡಲು ಶಾಹೀನಗೆ ಒತ್ತಾಯಿಸಿದರಂತೆ.

ಅಲ್ಲದೆ ಆರೀಫ್ ಕುಟುಂಬಸ್ಥರು ಶಾಹೀನಗೆ ಕಿರುಕುಳ ನೀಡಿತ್ತಿದ್ದಾರಂತೆ. ಇದರಿಂದ ಬೇಸತ್ತ ಶಾಹೀನ ಪೋಲಿಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ. ಆಗ ಆರೀಫ್ ಶಾಹೀನ ಜೊತೆ ಸರಿಯಾಗಿ ಸಂಸಾರ ಮಾಡುವುದಾಗಿ ಹೇಳಿ ಕರೆದುಕೊಂಡು ಬಂದಿದ್ದಾನೆ. ನಂತರ ಆರೀಫ್ ಕೆಲ ದಿನ ಸರಿಯಾಗಿದ್ದು, ನಂತರ ಶಾಹೀನ ಮೇಲೆ ಹಲ್ಲೆ ಕೂಡ ಮಾಡಿದ್ದಾನಂತೆ.

ನಂತರ ಇಬ್ಬರು ವಿಜಯಪುರದ ಬುರಣಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರಂತೆ. ಅಲ್ಲಿಯೂ ಕೂಡ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಆಗ ಆರೀಫ್ ತನ್ನ ಇಬ್ಬರು ಸಂಬಂಧಿಕರೊಟ್ಟಿಗೆ ಬಂದು ಚಾಕು ತೋರಿಸಿ, ಜೀವ ಬೆದರಿಕೆ ಹಾಕಿ ಶಾಹೀನ ಬಳಿ ಇದ್ದ ಹಣ, ಮೊಬೈಲ್ ಸೇರಿದಂತೆ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಸದ್ಯ ಶಾಹೀನ ಬೀದಿ ಪಾಲಾಗಿದ್ದು, ನನ್ನ ಗಂಡನನ್ನ ಹುಡುಕಿ ಕೊಡಿ ಅಂತಾ ವಿಜಯಪುರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಯಾವಾಗ ಕುವೈತ್​ನಿಂದ ಆರೀಫ್ ಹಾಗೂ ಶಾಹೀನ ತಾಳಿಕೋಟೆಗೆ ಬಂದರೋ ಆಗಿನಿಂದಲೇ ಸಮಸ್ಯೆ ಶುರುವಾಗಿದೆ. ಆರೀಫ್ ಮನೆಯವರು ಶಾಹೀನನನ್ನು ಒಪ್ಪಿಕೊಂಡಿಲ್ಲ. ಆಕೆ ತಮ್ಮ ಕುಟುಂಬದ ಸೊಸೆ ಆಗೋದು ಯಾರಿಗೂ ಇಷ್ಟವಿಲ್ಲ. ಈ ಕಾರಣದಿಂದ ಇಬ್ಬರ ಮಧ್ಯೆ ಗೋಡೆಯಾಗಿದ್ದಾರೆ. ಒಂದೂ ಮೂಲದ ಪ್ರಕಾರ ಕುವೈತ್​ನಲ್ಲಿ ಒಟ್ಟಿಗೆ ಇದ್ದ ಆರೀಫ್ ತನ್ನ ಅವಶ್ಯಕತೆಗಳಿಗೆ ಮಾತ್ರ ಬಳಕೆ ಮಾಡಿಕೊಂಡಿದ್ದಾನೆ. ಆಕೆ ದುಡಿದ ಹಣದಲ್ಲಿ ಮಜಾ ಮಾಡಿದ್ಧಾನೆ. ಆತನನ್ನೇ ನಂಬಿದ್ದ ಶಾಹೀನ್ ದುಡಿದ ಹಣವನ್ನು ಆತನಿಗೆ ನೀಡಿದ್ದಾಳೆ.

ಆಕೆಗೆ ಆರೀಫ್ ಮದುವೆಯಾಗುವ ಭರವಸೆ ನೀಡಿದ್ದಾನೆ. ಆಕೆಯೂ ಆತನನ್ನು ನಂಬಿ ಬಂದಿದ್ದಾಳೆ. ಯಾವಾಗ ಮನೆಯಲ್ಲಿ ಶಾಹೀನಗೆ ವಿರೋಧ ವ್ಯಕ್ತವಾಗಿಯೋ ಆಗ ಆರೀಫ್ ಸಹ ಆಕೆಯ ವಿರುದ್ದವಾಗಿ ನಡೆದು ಕೊಳ್ಳತೊಡಗಿದ್ದ. ಆಕೆಗೆ ಹಲ್ಲೆ ಮಾಡಿದ ಬಳಿಕ ಹಿಂಸೆ ನೀಡಿದ ಕಾರಣ ದಾರಿ ಕಾಣದೇ ಆಕೆ ತಾಳಿಕೋಟೆ ಪೊಲೀಸ್ ಠಾಣೆಗೆ ತೆರಳಿದ್ದಳು. ಅಲ್ಲಿ ನ್ಯಾಯ ಪಂಚಾಯತಿ ಮಾಡಿದ ಬಳಿಕ ಶಾಹೀನ್ ಜೊತೆಗೆ ವಿಜಯಪುರ ತಾಲೂಕಿನ ಬುರಣಾಪೂರದಲ್ಲಿದ್ದ. ಬಳಿಕ ಆಕೆಯಿಂದ ಮುಕ್ತಿ ಪಡೆಯೋಕೆ ಶಾಹೀನ ಬಳಿಯಿದ್ದದ್ದೆಲ್ಲವನ್ನೂ ತೆಗೆದುಕೊಂಡು ಆಕೆಗೆ ಜೀವ ಬೆದರಿಕೆ ಹಾಕಿ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಪ್ರೀತಿಯನ್ನು ನಂಬಿ ಬಂದವಳಿಗೆ ಅನ್ಯಾಯವಾಗಿದೆ. ಆಕೆಗೆ ನ್ಯಾಯ ನೀಡಬೇಕೆಂದು ಸ್ಥಳಿಯರು ಪೊಲೀಸರಿಗೆ ಮನವಿ ಮಾಡಿದ್ಧಾರೆ.

Leave a Reply

Your email address will not be published. Required fields are marked *