ಬೆಳ್ತಂಗಡಿ:(ಫೆ.4) ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಚಾರ್ಮಾಡಿ ಗ್ರಾಮದ ಪವನ್ ಕುಮಾರ್ ರವರು, ಅದೇ ಗ್ರಾಮದ ನಿವಾಸಿಯಾದ ನಿಝಮುದ್ದೀನ್ (S/o ಯು ಎಂ ಉಸ್ಮಾನ್ ) ರವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 1, 00,000 ಮೊತ್ತದ
ಇದನ್ನೂ ಓದಿ: Kerala: ಗಂಡನ ಚುಚ್ಚುಮಾತಿಗೆ ನೊಂದು ಪತ್ನಿ ಆತ್ಮಹತ್ಯೆ!!!
ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿರುತ್ತದೆ. ಆರೋಪಿಗೆ ರೂಪಾಯಿ ರೂ. 1,03,000 ದಂಡವನ್ನು ವಿಧಿಸಲಾಗಿದೆ.
ವಸೂಲಿ ಮಾಡಿದ ದಂಡದ ಮೊತ್ತದಲ್ಲಿ 1, 02,000 ಮೊತ್ತವನ್ನು ಪಿರಿಯಾದಿದಾರರಿಗೆ ಪರಿಹಾರವಾಗಿ ಪಾವತಿಸಬೇಕು, ದಂಡದ ಮೊತ್ತವನ್ನು ಪಾವತಿಸಲು ತಪ್ಪಿದಲ್ಲಿ ಆರೋಪಿಯು 6 ತಿಂಗಳ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾನೆ ಎಂದು ನ್ಯಾಯಾಲಯವು ತೀರ್ಪನ್ನು ನೀಡಿರುತ್ತದೆ.
ಸದರಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಪಿರಿಯಾದಿದಾರರ ಪರವಾಗಿ ನ್ಯಾಯವಾದಿಯಾದ ಶ್ರೀಮತಿ ಪ್ರಿಯಾಂಕ ಶಿವನ್ ರವರು ವಾದವನ್ನು ಮಂಡಿಸಿರುತ್ತಾರೆ.