Wed. Feb 5th, 2025

Kaliya : ಕಳಿಯ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿಯ ಸಭೆ

ಕಳಿಯ:(ಫೆ.4) ಕಳಿಯ ಗ್ರಾಮ ಪಂಚಾಯತ್ ನ ಗ್ರಂಥಾಲಯ ಸಲಹಾ ಸಮಿತಿಯ ಮೊದಲ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವಾಕರ ಮೆದಿನ ಇವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಜರಗಿತು.

ಇದನ್ನೂ ಓದಿ: Dakshina Kannada: ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ ಸೇರಿದಂತೆ ತಾಲೂಕಿನ ವಿವಿಧ ಶಾಲಾ ಮಕ್ಕಳಲ್ಲಿ ಚಿಕನ್ ಪಾಕ್ಸ್ ಸೋಂಕು ದೃಢ

ಪಂಚಾಯತ್ ಕಾರ್ಯದರ್ಶಿ ಕುಂಞ ಕೆ ಅವರು ಸ್ವಾಗತಿಸಿ ಸಭೆ ಕರೆದ ಉದ್ದೇಶಗಳನ್ನು ತಿಳಿಸಿದರು.
ಗ್ರಂಥಾಲಯದ ಮೇಲ್ವಿಚಾರಕರಾದ ಪ್ರಮೀಳಾ.ಪಿ ಗ್ರಂಥಾಲಯದಲ್ಲಿರುವ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಡೆಯುತ್ತಿರುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು.


ಗ್ರಂಥಾಲಯಕ್ಕೆ ಮೇಜುಗಳ ವ್ಯವಸ್ಥೆ, ಪುಸ್ತಕಗಳನ್ನು ಜೋಡಿಸಿ ಇಡಲು ಕವಾಟುಗಳು, ಪ್ರಿಂಟರ್, ಕಂಪ್ಯೂಟರ್ ದುರಸ್ತಿ ಆಗಬೇಕೆಂದು ಸಭೆಯ ಗಮನಕ್ಕೆ ತಂದರು. ಗ್ರಂಥಾಲಯವು ಸಮರ್ಪಕವಾಗಿ ಸೇವೆ ನಿರ್ವಹಿಸಲು ಪ್ರತ್ಯೇಕ ಗ್ರಂಥಾಲಯ ಕೊಠಡಿಯ ಅಗತ್ಯವಿದೆಯೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾತನಾಡಿ ಗ್ರಂಥಾಲಯ ಕೊಠಡಿಯ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.


ಪ್ರತ್ಯೇಕ ಕೊಠಡಿ ನಿರ್ಮಾಣ ಆಗುವವರೆಗೆ ಪಂಚಾಯತ್ ವತಿಯಿಂದ ಕೊಠಡಿಯ ವ್ಯವಸ್ಥೆಯನ್ನು ಮಾಡಬೇಕೆಂದು ಸಮಿತಿ ಸದಸ್ಯರಾದ ಕೇಶವ ಪೂಜಾರಿ ನಾಳ ಸಲಹೆ ನೀಡಿದರು.


ಸಭೆಯಲ್ಲಿ ಸಲಹಾ ಸಮಿತಿಯ ಸದಸ್ಯರಾದ ಸದಸ್ಯ ದಿವಾಕರ ಆಚಾರ್ಯ ಗೇರುಕಟ್ಟೆ, ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಈಶ್ವರಿ.ಕೆ, ಶರತ್ ಕುಮಾರ್, ದೇವಕಿ ಮರ್ತೋಟ್ಟು, ಶ್ರೀಮತಿ ಪ್ರಜ್ಞಾ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.‌ ಪಂಚಾಯತ್ ಕಾರ್ಯದರ್ಶಿಯವರು ವಂದಿಸಿದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು