ಪೆರ್ನಾಜೆ:(ಫೆ.4) ಬೆಂಗಳೂರು ಅರಮನೆ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಜನರನ್ನು ಆಕರ್ಷಿಸುತ್ತಿರುವ ವಿಂಟೇಜ್ ಕಾರ್ 1943 ಮಾಡೆಲ್ನಲ್ಲಿ ಈ ಕಾರು ತಯಾರಾಗಿದ್ದು ಈ ವರ್ಷವೇ ಅಖಿಲ ಹವ್ಯಕ ಮಹಾಸಭೆಯು ಪ್ರಾರಂಭವಾದ ವರ್ಷ ಅಖಿಲ ಹವ್ಯಕ ಮಹಾಸಭಾ 81 ವರ್ಷವಾಗಿದ್ದು ವಿಶೇಷ.
ಇದನ್ನೂ ಓದಿ: ಉಜಿರೆ: ರಜತ ಸಂಭ್ರಮದಲ್ಲಿರುವ ಉಜಿರೆಯ ಬೆನಕ ಆಸ್ಪತ್ರೆಯ ವತಿಯಿಂದ
ಹವ್ಯಕರು ವಿಶಿಷ್ಟ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಜನ ಬದುಕು ಭಾಷೆ ,ಆಹಾರ, ಹಬ್ಬ ಹರಿದಿನ ಕಲೆ ,ಸಾಹಿತ್ಯ ಎಲ್ಲದರಲ್ಲೂ ವಿಭಿನ್ನತೆಯನ್ನು ಕಂಡುಕೊಂಡಿರುವ ಸಮುದಾಯವಿದು.
ಅಂತೆ ಅರಮನೆ ಮೈದಾನದಲ್ಲಿ ಈ ವಿಶೇಷವಾದ ಕಾರನ್ನು ಪ್ರದರ್ಶಿಸಲಾಯಿತು. ಜನ ಜೀವನವನ್ನು ಪ್ರತಿನಿಧಿಸುವ ವಿಶೇಷ ಪ್ರದರ್ಶನದಲ್ಲಿ ಪಾರಂಪರಿಕ ಹಳೆಯ ವಸ್ತುಗಳನ್ನು ಪ್ರದರ್ಶಿಸಲಾಯಿತು.
ಇತ್ತೀಚೆಗೆ ಅತ್ಯಂತ ಹಳೆಯದಾದ ಅಪರೂಪದಲ್ಲಿ ಅಪರೂಪಕ್ಕೆ ಕಾಣುವoತಹ ವಿಶೇಷವಾದ ವಿಂಟೇಜ್ ಕಾರನ್ನು ನೋಡಿ ಕಣ್ತುಂಬಿ ಕೊಂಡರು.
ಕಂಬಳಿ ಹುಳ ತನ್ನ ಜೀವನ ಮುಗಿದು ಹೋಯಿತು ಎಂದು ನೋವು ಪಡುವಷ್ಟರಲ್ಲಿ ಸುಂದರವಾದ ಪತಂಗವಾಗಿ ಮಾರ್ಪಟ್ಟು ಸ್ವ ಇಚ್ಛೆಯಿಂದ ಹಾರಿಹೋಗುತ್ತದೆ, ಮನುಷ್ಯನ ಜೀವನ ಕೂಡ ಇಷ್ಟೇ ಕಷ್ಟ ಬಂದಾಗ ತಾಳ್ಮೆಯಿಂದ ಇದ್ದರೆ ಹೊಸ ಜೀವನ ಶುರುವಾಗುತ್ತದೆ ಅಂತಹ ನಮ್ಮಲ್ಲಿ ಚೇತೋಹಾರಿ ಬರಹದಿಂದ ನಮ್ಮನ್ನೆಲ್ಲ ಪುಲಕಿತರಾಗಿಸಿದ ವಿಶ್ವರೂಪ ತೋರಿದ ವಿಶ್ವ ಹವ್ಯಕ ಸಮ್ಮೇಳನ ದಿವ್ಯ ಭವ್ಯ ಹವ್ಯಕ ಲೋಕವಾಗಿ ಅನಾವರಣಗೊಂಡಿತು.