Wed. Feb 5th, 2025

Vitla: ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣ – ಕೇರಳ ಮೂಲದ ಆರೋಪಿ ಅರೆಸ್ಟ್!‌ – ಅರೆಸ್ಟ್‌ ಆದ ತಕ್ಷಣ ಆಸ್ಪತ್ರೆ ಸೇರಿದ ಆರೋಪಿ!!

ವಿಟ್ಲ:(ಫೆ.4) ಬೋಳಂತೂರು ನಾರ್ಶ ಸುಲೈಮಾನ್‌ ಹಾಜಿ ಅವರ ಮನೆಗೆ ಇಡಿ ಅಧಿಕಾರಿಗಳ ರೀತಿ ಬಂದು ದಾಳಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇನ್ನೋರ್ವ ಆರೋಪಿಯನ್ನು ಬಂಧನ ಮಾಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಕಿವಿ ಚುಚ್ಚಲು ಅರಿವಳಿಕೆ ಮದ್ದು

ಕೇರಳ ಮೂಲದ ಸಚಿನ್‌ ಎಂಬಾತನೇ ಬಂಧಿತ ಆರೋಪಿ. ಈತನನ್ನು ಮುಂಬೈಯಿಂದ ಪೊಲೀಸರು ಕರೆತಂದಿದ್ದು, ವಶಕ್ಕೆ ಪಡೆದಿದ್ದಾರೆ. ಬಂಧಿಸಿದ ಕೂಡಲೇ ಈತನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ ಕಾರಣ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಲೆನೋವು, ಅಪಸ್ಮಾರ ಸಮಸ್ಯೆಯಿಂದ ಬಂಧಿತ ಆರೋಪಿ ಬಳಲುತ್ತಿದ್ದಾನೆ. ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಬೋಳಂತೂರಿನ ನಾರ್ಶ ಎಂಬಲ್ಲಿ ಜನವರಿ 3 ರಂದು ಸಿಂಗಾರಿ ಬೀಡಿ ಮಾಲಕ ಸುಲೈಮಾನ್‌ ಹಾಜಿ ಮನೆಗೆ ಇಡಿ ಅಧಿಕಾರಿಗಳ ಹೆಸರಿನಲ್ಲಿ ದಾಳಿ ಮಾಡಿ ದರೋಡೆ ಮಾಡಿರುವ ಘಟನೆಯೊಂದು ನಡೆದಿತ್ತು. ಈಗಾಗಲೇ ಕೇರಳದ ಕೊಟ್ಟಾಯಂ ನಿವಾಸಿ ಅನಿಲ್‌ ಫೆರ್ನಾಂಡಿಸ್‌ ಎನ್ನುವ ಆರೋಪಿಯನ್ನು ಬಂಧನ ಮಾಡಲಾಗಿದೆ. ಇನ್ನೋರ್ವನ ಬಂಧನ ಇದೀಗ ಮಾಡಲಾಗಿದ್ದು, ಇನ್ನೂ ನಾಲ್ವರು ಆರೋಪಿಗಳ ಪತ್ತೆ ಮಾಡಬೇಕಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು