Wed. Feb 5th, 2025

Belthangady: ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ “ವಿಶ್ವ ಕ್ಯಾನ್ಸರ್ ಡೇ” ಜಾಗೃತಿ ಕಾರ್ಯಕ್ರಮ

ಬೆಳ್ತಂಗಡಿ :(ಫೆ.5) ವಿಶ್ವದಾದ್ಯಂತ ಇಂದು ಕ್ಯಾನ್ಸರ್ ಸಮಸ್ಯೆ ಆವರಿಸಿಕೊಂಡಿದೆ. ಆರೋಗ್ಯದ ಮೇಲಿನ ನಿರ್ಲಕ್ಷ್ಯದಿಂದ ಕ್ಯಾನ್ಸರ್ ಪೀಡಿತರ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದೆ. ಆರೋಗ್ಯಕರ ಜೀವನ ಶೈಲಿಯನ್ನು ರೂಪಿಸಿಕೊಳ್ಳುವುದು ಮೂಲಕ ಕ್ಯಾನ್ಸರ್ ಸಮಸ್ಯೆಯನ್ನು ದೂರ ಮಾಡಬವುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಇಎನ್ಟಿ ತಜ್ಞ ಡಾ.ರೋಹನ್ ಎಮ್ ದೀಕ್ಷಿತ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: Charmadi Ghat : ಚಾರ್ಮಾಡಿ ಘಾಟ್ ನ ಕಾಡ್ಗಿಚ್ಚು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!!

ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾ ಭವನದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

70ರ ನಂತರದ ವಯಸ್ಕರಲ್ಲಿ ಕಂಡು ಬರುತ್ತಿದ್ದ ಕ್ಯಾನ್ಸರ್ ಲಕ್ಷಣಗಳು ಇಂದು 30ರ ಹರೆಯದವರಲ್ಲಿ ಕಂಡು ಬರುತ್ತಿರುವುದು ಆಘಾತಕಾರಿ ವಿಷಯ. ಜನರು ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಾಗ ಭಯ ಪಡದೆ ಚಿಕಿತ್ಸೆಗೆ ಮುಂದಾಗಬೇಕು. ಮುಂದುವರಿದಿರುವ ವೈದ್ಯಕೀಯ ಕ್ಷೇತ್ರದಲ್ಲಿ ಜೈವಿಕ ಅಂಶದಿಂದ ಹರಡುವ ಕ್ಯಾನ್ಸರ್ ಗಳಿಗು ಇಂದು ಪೂರ್ವಭಾವಿ ಚಿಕಿತ್ಸೆಗಳಿವೆ. ಕ್ಯಾನ್ಸರ್ ಪೀಡಿತರು ಸರ್ಕಾರದ ಆರೋಗ್ಯ ವಿಮೆ, ಲಸಿಕೆ ಮತ್ತು ಇತ್ಯಾದಿ ಸವಲತ್ತುಗಳ ಫಲಾನುಭವಿಗಳಾಗಬೇಕು.

ಆದಷ್ಟು ಜಂಕ್ ಫುಡ್ಸ್, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿದ್ದು. ಸಮತೋಲನವಾದ ಆರೋಗ್ಯವನ್ನು ಕಾಪಾಡುವ ಶುಚಿಯಾದ ಹಣ್ಣು-ತರಕಾರಿಯ ಸೇವನೆ, ಯೋಗ – ಧ್ಯಾನ ರೂಢಿಸಿಕೊಳ್ಳುವುದು, ಹೆಚ್ಚು ನೀರನ್ನು ಕುಡಿಯುವ ಮತ್ತು ದಿನನಿತ್ಯ ಚಲನಶೀಲರಾಗಿರುವುದರಿಂದ ನಮ್ಮ ಆರೋಗ್ಯದ ಗುಟ್ಟನ್ನು ನಾವೇ ಕಂಡುಕೊಳ್ಳಬಹುದು. ಕ್ಯಾನ್ಸರ್ ಜಾಗತೀಕ ಕಾಯಿಲೆಯಾಗಿದ್ದರೂ ಅದನ್ನು ನಾವು ತಡೆಯಬಹುದು ಎಂದರು.

ಇದೇ ವೇಳೆ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ವಿವಿಧ ಕ್ಯಾನ್ಸರ್ ಗಳು ಮತ್ತು ಅದಕ್ಕಿರುವ ಚಿಕಿತ್ಸೆಗಳು ನಾವು ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕಿರುವ ಪೂರ್ವಭಾವಿ ಲಸಿಕೆ ಇತ್ಯಾದಿಯ ಕುರಿತಾಗಿ ಚರ್ಚಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಮಾತನಾಡಿ, ಹಿಂದೆ ಕ್ಯಾನ್ಸರ್ ಎಂದರೆ ವಿದೇಶಿಗರಲ್ಲಾ ಎಂಬ ಮನೋಭಾವವಿತ್ತು ಆದರೆ ಇಂದು ಎಲ್ಲಾ ಬಗೆಯ ಕ್ಯಾನ್ಸರ್ ಗಳು ನಮ್ಮ ಮನೆಯ ಅಂಗಳವನ್ನು ತಲುಪಿದೆ. ಇದಕ್ಕೆಲ್ಲ ಕಾರಣ ಆಹಾರ ಮತ್ತು ಆರೋಗ್ಯದ ನಿರ್ಲಕ್ಷ್ಯತೆ. ವಿಪರೀತವಾದ ರಾಸಾಯನಿಕ ಮಿಶ್ರಿತ ಪದಾರ್ಥಗಳ ಸೇವನೆಯಿಂದ ನಾವು ಹೊರಬರಬೇಕು ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರೋ. ಅಬೂಬಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನ ರೋ. ಮನೋರಮಾ ಭಟ್, ಪ್ರವೀಣ್ ಗೋರೆ ಮತ್ತು ಇತರೆ ಸದಸ್ಯರು ಭಾಗಿಯಾಗಿದ್ದರು.

ಕ್ಯಾನ್ಸರ್ ಒಂದು ಎಲ್ಲೆಡೆ ಹರಡಿಕೊಂಡಿರುವ ಗಂಭೀರ ಸಮಸ್ಯೆ. ಕ್ಯಾನರ್ ಕುರಿತಾದ ಜಾಗೃತಿ ಕಾರ್ಯಕ್ರಮಗಳು ಇಂದು ಅವಶ್ಯಕತೆ ಇದೆ. ಜನರು ಕ್ಯಾನ್ಸರ್ ನಿಂದ ಭಯಭೀತರಾಗದೆ ಚಿಕಿತ್ಸೆಯ ಮೂಲಕ ರೋಗ ನಿವಾರಿಸಿಕೊಳ್ಳುವುದು ಮತ್ತು ಪೂರ್ವಭಾವಿ ಪರೀಕ್ಷೆಗಳನ್ನು ಮಾಡಿಸಿ ಕೊಳ್ಳುವ ಕುರಿತಾಗಿ ಸರ್ಕಾರ ಸೇರಿದಂತೆ ಸಂಘ ಸಂಸ್ಥೆಗಳು ತಿಳಿ ಹೇಳಬೇಕಿದೆ. ಹೆಚ್ಚಾಗಿ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗಿ ಕ್ಯಾನ್ಸರ್ ಗಳಿಗೆ ಶರಣಾಗುವುದನ್ನು ತಪ್ಪಿಸಬೇಕು. ಯುವ ಜನತೆ ಕ್ಯಾನ್ಸರ್ ಮುಕ್ತ ಘೋಷವಾಕ್ಯ ದೊಂದಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದೆಡಗೆ ಗಮನ ನೀಡಬೇಕು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು