ಬೆಳ್ತಂಗಡಿ :(ಫೆ.6) ಸರಿಯಾದ ದಾಖಲೆಗಳಿಲ್ಲದೆ ಕಬ್ಬಿಣದ ಗುಜರಿಯನ್ನು ಸಾಗಿಸುತ್ತಿದ್ದ ಲಾರಿಯನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿ ಲಾರಿಯನ್ನು ಬೆಳ್ತಂಗಡಿ ಪೊಲೀಸರ ವಶಕ್ಕೆ ನೀಡಿದ್ದರು. ಬಳಿಕ ಕಬ್ಬಿಣದ ವಸ್ತುವಿನ ಮಾಲೀಕರಿಗೆ ದಂಡ ವಿಧಿಸಿದ್ದಾರೆ.
![](https://uplustv.com/wp-content/uploads/2025/02/muli.jpg)
ಇದನ್ನೂ ಓದಿ: ಉಡುಪಿ: ಮರಕ್ಕೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು
KA-25-AB-2169 ಅಶೋಕ್ ಲೈಲ್ಯಾಂಡ್ ಲಾರಿಯಲ್ಲಿ ಕಬ್ಬಿಣದ ವಸ್ತುಗಳನ್ನು (ಗುಜರಿ) ಬೆಳ್ತಂಗಡಿ ಚರ್ಚ್ ರೋಡ್ ಕಡೆಯಿಂದ ಚಿಕ್ಕಮಗಳೂರು ಕಡೆಗೆ ಸಾಗಿಸುತ್ತಿದ್ದಾಗ ಜ.27 ರಂದು ರಾತ್ರಿ ಸುಮಾರು 7 ಗಂಟೆಗೆ
![](https://uplustv.com/wp-content/uploads/2025/02/51b5a0cd-f9b6-499f-a45b-f15e5ee2ea78-1024x1024.jpg)
![](https://uplustv.com/wp-content/uploads/2025/02/057b1d26-13c1-450b-9ca4-33b6e7226863-810x1024.jpg)
![](https://uplustv.com/wp-content/uploads/2025/02/u-plus-poster.jpg)
ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಜಾರಿ-1 ಸತೀಶ್ ಬಟ್ವಾಡಿ ನೇತೃತ್ವದ ತಂಡ ಕರ್ತವ್ಯದಲ್ಲಿರುವಾಗ ಬೆಳ್ತಂಗಡಿ ತಾಲೂಕಿನ ಲಾಯಿಲ ಹೆದ್ದಾರಿಯ ರಸ್ತೆಯಲ್ಲಿ ತಡೆದು ನಿಲ್ಲಿಸಿ ಲಾರಿಯನ್ನು ತಪಾಸಣೆ ಮಾಡಿದಾಗ ಸರಿಯಾದ ದಾಖಲೆಗಳು ಇಲ್ಲದಿರುವುದು ಕಂಡು ಬಂದಿದ್ದು, ನಂತರ ಲಾರಿಯನ್ನು ಚಾಲಕ ಹುಬ್ಬಳಿ ಮೂಲದ ವೀರಭದ್ರ ಮೂಲಕ ಬೆಳ್ತಂಗಡಿ ಪೊಲೀಸ್ ಠಾಣೆಯ ವಶಕ್ಕೆ ನೀಡಿ ನೋಟಿಸ್ ನೀಡಿದ್ದರು.
![](https://uplustv.com/wp-content/uploads/2025/02/WhatsApp-Image-2024-07-12-at-16.54.12_23b03a5a.jpg)
ಕಬ್ಬಿಣ ಸಾಗಿಸುವ ಮಾಲೀಕ ಮಂಗಳೂರು ವಾಣಿಜ್ಯ ಇಲಾಖೆ ಕಚೇರಿಗೆ ಫೆ.3 ರಂದು ಬಂದು ದಾಖಲೆಗಳ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ಅಧಿಕಾರಿಗಳು ದಂಡ ವಿಧಿಸಿ ಫೆ.4 ರಂದು ಲಾರಿಯನ್ನು ಮತ್ತು ಕಬ್ಬಿಣದ ವಸ್ತುಗಳನ್ನು ಬಿಡುಗಡೆ ಮಾಡಿದ್ದಾರೆ.
![](https://uplustv.com/wp-content/uploads/2025/02/WhatsApp-Image-2024-10-18-at-11.21.38_8ae796c7-667x1024.jpg)