Thu. Feb 6th, 2025

Bengaluru: ಪತ್ನಿ ಕೊಲೆ ಮುಚ್ಚಿಡಲು ಕಿಲಾಡಿ ಪತಿ ಕಟ್ಟಿದ್ದ ಕಥೆ ಎಂತದ್ದು ಗೊತ್ತಾ..?! – ತನಿಖೆಯಲ್ಲಿ ಗಂಡನ ಕಹಾನಿ ಬಟಾಬಯಲು

ಬೆಂಗಳೂರು, (ಫೆ.06): ಮಧ್ಯರಾತ್ರಿ ಸುಮಾರು 3 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನ 16ನೇ ಕ್ರಾಸ್ ನಲ್ಲಿರುವ ಈ ಅಪಾರ್ಟ್ಮೆಂಟ್ ನಲ್ಲಿ ಮಹಿಳೆಯನ್ನು ತರಾತುರಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ಬಂಟ್ವಾಳ: ಕಲ್ಲಡ್ಕ ಸೂಪರ್ ಬಜಾರ್ ನ ಬೀಗ ಮುರಿದು ನಗದು ಕಳವು!!

ಆಸ್ಪತ್ರೆಗೆ ಸೇರಿದ ಮಹಿಳೆಯನ್ನು ಪರಿಶೀಲಿಸಿದ ವೈದ್ಯರು ಅದಾಗಲೇ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಇದೇ ವೇಳೆ ಪತ್ನಿಗೆ ಏನಾಗಿತ್ತು ಎಂದು ಕೇಳಿದವರಿಗೆಲ್ಲ ಪತಿರಾಯ ಕಥೆಯೊಂದನ್ನು ಹೇಳುತ್ತಿದ್ದ. ಆದರೆ, ಪತಿಯ ಕಳ್ಳಾಟ ಹೆಚ್ಚು ಹೊತ್ತು ನಡೆಯಲಿಲ್ಲ. ಮರಣೋತ್ತರ ಪರೀಕ್ಷೆ ಮತ್ತು ಪೊಲೀಸರ ವಿಚಾರಣೆಯಲ್ಲಿ ಮಹಿಳೆ ಕೊಲೆ ರಹಸ್ಯ ಬಯಲಾಗಿದೆ.

ಮೂಲತಃ ದಾವಣಗೆರೆಯವರಾದ ಚೇತನಾ ಮತ್ತು ಶರತ್ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ, ಗಂಡ ಹೆಂಡತಿ ನಡುವೆ ಇದ್ದ ಜಗಳ‌ ತಾರಕಕ್ಕೇರಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ.

ಮಧ್ಯರಾತ್ರಿ ತನ್ನ ಪತ್ನಿಯನ್ನು ಶರತ್ ಉಸಿರುಗಟ್ಟಿಸಿ‌ ಕೊಲೆ ಮಾಡಿದ್ದ. ಆದರೆ ಸಾವಿನ ಬಗ್ಗೆ ಕಥೆ ಹೇಳಿದ್ದವನ ಬಂಡವಾಳ ವೈದ್ಯರ ಪರೀಕ್ಷೆ ವೇಳೆ ಬಯಲಾಗಿದೆ. ಸದ್ಯ ಪೊಲೀಸರು ಆರೋಪಿ ಶರತ್​ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಚೇತನಾ ಎಂಬಾಕೆಯನ್ನು ಆಕೆಯ ಪತಿ ಶರತ್ ಉತ್ತಂಗಿ ಎಂಬಾತನೇ ಕೊಲೆ ಮಾಡಿದ್ದ. ಮೂಲತಃ ದಾವಣಗೆರೆಯವರಾದ ಚೇತನಾ ಮತ್ತು ಶರತ್ ಪ್ರೀತಿಸಿ ಮದುವೆಯಾಗಿ 15 ವರ್ಷ ಕಳೆದಿತ್ತು.‌ ದಂಪತಿಗೆ ಮಗಳು ಕೂಡ ಇದ್ದಳು. ಜೀವನಕ್ಕಾಗಿ ಚೇತನಾ ಖಾಸಗಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದರೆ, ಶರತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ಮಧ್ಯರಾತ್ರಿ ಶರತ್ ತನ್ನ ಪತ್ನಿ ಮಂಚದಿಂದ ಕೆಳಗಡೆ ಬಿದ್ದು ಮೂರ್ಚೆ ತಪ್ಪಿದ್ದಾಳೆ ಎಂದು ಅಕ್ಕಪಕ್ಕದ ಮನೆಯವರ ಜೊತೆ ಆಸ್ಪತ್ರೆಗೆ ಸೇರಿಸಿದ್ದ.

ಬಳಿಕ ಮೊದ ಮೊದಲು ಪತ್ನಿಗೆ ಏನಾಯ್ತು ಎಂದು ಕೇಳಿದವರಿಗೆಲ್ಲ ಮಂಚದಿಂದ ಕೆಳಗಡೆ ಬಿದ್ದು ಅಸ್ವಸ್ಥಳಾಗಿದ್ದಾಳೆ‌ ಅಂತ ಶರತ್ ಕಥೆ ಹೇಳಿದ್ದ. ಆದರೆ ವೈದ್ಯರು ಚೇತನಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಶರತ್ ನನ್ನು ವಿಚಾರಣೆ ನಡೆಸಿದ ವೈಯಾಲಿಕಾವಲ್ ಪೊಲೀಸರಿಗೆ ಅಸಲಿ ವಿಚಾರ ಗೊತ್ತಾಗಿದೆ.

Leave a Reply

Your email address will not be published. Required fields are marked *