Thu. Feb 6th, 2025

Kerala: ಮದುವೆಯ ಹಿಂದಿನ ದಿನವೇ ನೇಣಿಗೆ ಶರಣಾದ ಯುವತಿ!! – ಆದ್ರೆ ಇದರ ಹಿಂದಿತ್ತು ಸ್ಫೋಟಕ ರಹಸ್ಯ!!!

ಕೇರಳ:(ಫೆ.6) ಮದುವೆಯ ಹಿಂದಿನ ದಿನವೇ ಯುವತಿ ನೇಣಿಗೆ ಶರಣಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಶೈಮಾ ಸಿನಿವರ್(18) ಮೃತ ಯುವತಿ.

ಇದನ್ನೂ ಓದಿ: ನಿಡ್ಲೆ:(ಫೆ.8) ಅಗ್ರಿಲೀಫ್‌ ಎಕ್ಸ್ ಪೋರ್ಟ್‌ ಪ್ರೈವೇಟ್‌ ಲಿಮಿಟೆಡ್‌ ಇದರ ವಿಸ್ತೃತ ಘಟಕದ ಉದ್ಘಾಟನಾ ಸಮಾರಂಭ ” ಅಗ್ರಿಲೀಫ್‌ 2.0 “

ಯುವತಿ ಸಾವನ್ನಪ್ಪಿದ ಬೆನ್ನಲ್ಲೇ ಆಕೆಯ ಪ್ರಿಯಕರ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶೈಮಾ ಸಿನಿವರ್ ತಂದೆ ತೀರಿಕೊಂಡಿದ್ದು, ತನ್ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದಳು.

ಈ ನಡುವೆ ಮನೆಯ ಪಕ್ಕದಲ್ಲೇ ಇದ್ದ ಯುವಕ ಸಜೀರ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಕುಟುಂಬಸ್ಥರು ಬೇರೆ ಯುವಕನ ಜೊತೆ ಆಕೆಗೆ ವಿವಾಹವನ್ನು ನಿಗದಿಪಡಿಸಿದ್ದು, ನಿಶ್ಚಿತಾರ್ಥವೂ ನಡೆದಿತ್ತು.

ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿ ಶೈಮಾ ತಾನು ಸಜೀ‌ರ್ ಎಂಬಾತನನ್ನು ಪ್ರೀತಿಸುತ್ತಿದ್ದ ಬಗ್ಗೆ ಕುಟುಂಬಸ್ಥರಲ್ಲಿ ಹೇಳಿಕೊಂಡಿದ್ದಳು. ಆದರೆ ಕುಟುಂಬವು ಇದಕ್ಕೆ ನಿರಾಕರಿಸಿತ್ತು. ಈ ಕಾರಣಕ್ಕಾಗಿ ಆಕೆ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *