ಕೇರಳ:(ಫೆ.6) ಮದುವೆಯ ಹಿಂದಿನ ದಿನವೇ ಯುವತಿ ನೇಣಿಗೆ ಶರಣಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಶೈಮಾ ಸಿನಿವರ್(18) ಮೃತ ಯುವತಿ.
![](https://uplustv.com/wp-content/uploads/2025/02/WhatsApp-Image-2024-10-18-at-11.21.38_8ae796c7-1-667x1024.jpg)
ಯುವತಿ ಸಾವನ್ನಪ್ಪಿದ ಬೆನ್ನಲ್ಲೇ ಆಕೆಯ ಪ್ರಿಯಕರ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶೈಮಾ ಸಿನಿವರ್ ತಂದೆ ತೀರಿಕೊಂಡಿದ್ದು, ತನ್ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದಳು.
ಈ ನಡುವೆ ಮನೆಯ ಪಕ್ಕದಲ್ಲೇ ಇದ್ದ ಯುವಕ ಸಜೀರ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಕುಟುಂಬಸ್ಥರು ಬೇರೆ ಯುವಕನ ಜೊತೆ ಆಕೆಗೆ ವಿವಾಹವನ್ನು ನಿಗದಿಪಡಿಸಿದ್ದು, ನಿಶ್ಚಿತಾರ್ಥವೂ ನಡೆದಿತ್ತು.
![](https://uplustv.com/wp-content/uploads/2025/02/51b5a0cd-f9b6-499f-a45b-f15e5ee2ea78-1-1024x1024.jpg)
![](https://uplustv.com/wp-content/uploads/2025/02/057b1d26-13c1-450b-9ca4-33b6e7226863-1-810x1024.jpg)
![](https://uplustv.com/wp-content/uploads/2025/02/muli-1.jpg)
![](https://uplustv.com/wp-content/uploads/2025/02/u-plus-poster-1.jpg)
ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿ ಶೈಮಾ ತಾನು ಸಜೀರ್ ಎಂಬಾತನನ್ನು ಪ್ರೀತಿಸುತ್ತಿದ್ದ ಬಗ್ಗೆ ಕುಟುಂಬಸ್ಥರಲ್ಲಿ ಹೇಳಿಕೊಂಡಿದ್ದಳು. ಆದರೆ ಕುಟುಂಬವು ಇದಕ್ಕೆ ನಿರಾಕರಿಸಿತ್ತು. ಈ ಕಾರಣಕ್ಕಾಗಿ ಆಕೆ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.
![](https://uplustv.com/wp-content/uploads/2025/02/WhatsApp-Image-2024-07-12-at-16.54.12_23b03a5a-1.jpg)