ಮೂಲ್ಕಿ:(ಫೆ.6) ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಸಮೀಪದ ಕೊಯ್ಕುಡೆ ಬಳಿ ನ್ಯಾಯಾಧೀಶರ ಮನೆಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಏನೂ ಸಿಗದೆ ಬರಿಗೈ ಯಲ್ಲಿ ವಾಪಸಾದ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರು: ಪತ್ನಿ ಕೊಲೆ ಮುಚ್ಚಿಡಲು ಕಿಲಾಡಿ ಪತಿ ಕಟ್ಟಿದ್ದ ಕಥೆ ಎಂತದ್ದು ಗೊತ್ತಾ?!
ಬೆಂಗಳೂರಿನಲ್ಲಿ ನ್ಯಾಯಾಧೀಶರಾಗಿರುವ ಮುಮ್ತಾಜ್ ರವರು ಮೂಲತಃ ಹಳೆಯಂಗಡಿ ಕಿನ್ನಿಗೋಳಿ ಹೆದ್ದಾರಿಯ ಪಕ್ಷಿಕೆರೆ ಕೊಯಿಕುಡೆ ನಡೆದಿದೆ. ಕಳ್ಳರು ಮನೆಯ ಎದುರಿನ ಬಾಗಿಲ ಲಾಕ್ ಅನ್ನು ಒಡೆದು ಒಳಗೆ ನಾಲ್ಕು ಕಪಾಟಿನಲ್ಲಿರುವ ಬಟ್ಟೆ ಬರೆಗಳನ್ನು ಎಳೆದು ಜಾಲಾಡಿದ್ದು ಏನೂ ಸಿಗದೆ ಬರಿಗೈಯಲ್ಲಿ ವಾಪಾಸಾಗಿದ್ದಾರೆ.
ಕಳ್ಳರು ಮನೆಯ ಸಿಸಿ ಕ್ಯಾಮೆರಾ ವನ್ನು ಬೇರೆ ಕಡೆಗೆ ತಿರುಗಿಸಿದ್ದು ವ್ಯವಸ್ಥಿತ ರೀತಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ, ನ್ಯಾಯಾಧೀಶರಾದ ಮುಮ್ತಾಜ್ ರವರು ಬೆಂಗಳೂರಿನಲ್ಲಿ ವಾಸ್ತವ್ಯವಿದ್ದು 15 ದಿನಗಳಿಗೊಮ್ಮೆ ಮನೆ ಕಡೆ ಬಂದು ಹೋಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮನೆಯಲ್ಲಿ ಬೆಲೆಬಾಳುವ ಒಡವೆ ಹಾಗೂ ಹಣ ಇದ್ದು ಬೇರೆ ಕಡೆ ಅಡಗಿಸಿ ಇಟ್ಟಿದ್ದರಿಂದ ಭಾರೀ ಕಳ್ಳತನ ತಪ್ಪಿದೆ.
ಸ್ಥಳಕ್ಕೆ ಮಂಗಳೂರು ಎಸಿಪಿ ಶ್ರೀಕಾಂತ್, ಮುಲ್ಕಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನಿತಾ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದು , ಶ್ವಾನ ದಳ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.