ನಿಡ್ಲೆ:(ಫೆ.6) ಜಾಗತಿಕ ಮಟ್ಟದಲ್ಲಿ ಹೊಸ ಭಾಷ್ಯಕ್ಕೆ ಮುನ್ನುಡಿ ಬರೆಯುತ್ತಿರುವ ಅಗ್ರಿಲೀಫ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಇದರ ವಿಸ್ತೃತ ಘಟಕದ ಉದ್ಘಾಟನಾ ಸಮಾರಂಭ ” ಅಗ್ರಿಲೀಫ್ 2.0 ” ( ರೈತರ ಜೊತೆ – ವಿಶ್ವದ ಕಡೆ) ವು ಫೆ. 8 ರಂದು ಅಗ್ರಿಲೀಫ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಬರಂಗಾಯ , ನಿಡ್ಲೆಯಲ್ಲಿ ನಡೆಯಲಿದೆ.
ಇದನ್ನೂ ಓದಿ: Manjeshwara: ಬಸ್ ನಲ್ಲಿ ಪ್ರಯಾಣಿಕರ ಹಣ ಹಾಗೂ ಮೊಬೈಲ್ ಫೋನ್ ಕಳವುಗೈದ ಮಹಿಳಾಮಣಿಗಳು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದ.ಕ. ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗೌರವಾನ್ವಿತ ಅತಿಥಿಯಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ,
ವಿಶೇಷ ಅತಿಥಿಗಳಾಗಿ ಮಂಗಳೂರು ಕ್ಯಾಂಪ್ಕೋ ದ ವ್ಯವಸ್ಥಾಪಕ ನಿರ್ದೇಶಕರಾದ ಬಿ.ವಿ. ಸತ್ಯನಾರಾಯಣ, ಶಶಿ ಕೇಟರಿಂಗ್ ಸರ್ವೀಸಸ್ ಬರೋಡಾ ದ ನಿರ್ದೇಶಕರು, ಸಂಸ್ಥಾಪಕರು ಹಾಗೂ ಸಿಇಒ ರಾದ ಶಶಿಧರ್ ಶೆಟ್ಟಿ ಬರೋಡಾ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಪಾರಂಪರಿಕ ಧರ್ಮದರ್ಶಿಗಳಾದ ಯು. ಶರತ್ ಕೃಷ್ಣ ಪಡ್ವೆಟ್ನಾಯ ರವರು ಪಾಲ್ಗೊಳ್ಳಲ್ಲಿದ್ದಾರೆ.
ರಾತ್ರಿ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವೃತ್ತಿಪರ ಕಲಾವಿದರಿಂದ ಇಂದ್ರಜಿತು ಕಾಳಗ ಲವ-ಕುಶ ಯಕ್ಷಗಾನ ಪ್ರದರ್ಶನ ನಡೆಯಲಿದೆ.