ಪುತ್ತೂರು:(ಫೆ.6) ಪುತ್ತೂರು ಮಹಾಲಿಂಗೇಶ್ವರ ಸೇರಿದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕಟ್ಟಡ ಧ್ವಂಸ ಮಾಡಿದ ಆರೋಪದಲ್ಲಿ ರಾಜೇಶ್ ಬನ್ನೂರು ಸಹಿತ 9 ಮಂದಿ ವಿರುದ್ಧ ಪ್ರಕರಣ ದಾಖಲಾದ ಕುರಿತು ವರದಿಯಾಗಿದೆ.
![](https://uplustv.com/wp-content/uploads/2025/02/muli.jpg)
ಇದನ್ನೂ ಓದಿ: ಮಂಗಳೂರು: ಕಲರ್ಸ್ ಮಸಾಜ್ ಪಾರ್ಲರ್ ಮೇಲೆ ದಾಳಿ ಪ್ರಕರಣ
ದೇವಸ್ಥಾನದ ಎಕ್ಸಿಕ್ಯೂಟಿವ್ ಆಫೀಸರ್ ಕೆ.ವಿ.ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಜಾನೆ ಸಮಯದಲ್ಲಿ ರಾಜೇಶ್ ಬನ್ನೂರು ಸಹಿತ 9 ಜನರ ತಂಡ ಅಕ್ರಮ ಪ್ರವೇಶ ಮಾಡಿ ಕಟ್ಟಡ ಧ್ವಂಸ ಮಾಡಿ, ಜಾಗ ಬಿಡುವುದಿಲ್ಲ ಎಂದು ಹೇಳಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
![](https://uplustv.com/wp-content/uploads/2025/02/51b5a0cd-f9b6-499f-a45b-f15e5ee2ea78-1024x1024.jpg)
![](https://uplustv.com/wp-content/uploads/2025/02/057b1d26-13c1-450b-9ca4-33b6e7226863-810x1024.jpg)
![](https://uplustv.com/wp-content/uploads/2025/02/u-plus-poster.jpg)
![](https://uplustv.com/wp-content/uploads/2025/02/WhatsApp-Image-2024-07-12-at-16.54.12_23b03a5a.jpg)
ಪ್ರಕರಣ ಸಂಬಂಧ BNS 2023 U/S 189(2) , 191(2), 329(3) , 324(5) , 351(2) , 190 ಅಡಿ ಪ್ರಕರಣ ದಾಖಲಾಗಿದೆ.
![](https://uplustv.com/wp-content/uploads/2025/02/WhatsApp-Image-2024-10-18-at-11.21.38_8ae796c7-667x1024.jpg)