ಸುಬ್ರಮಣ್ಯ:(ಫೆ.6) ಅನುಮಾನಾಸ್ಪದವಾಗಿ ಮನೆಯಂಗಳಕ್ಕೆ ಬಂದ ಅಪರಿಚಿತರನ್ನು ಮಹಿಳೆ ಕೋವಿ ಹಿಡಿದು ಓಡಿಸಿದ ಘಟನೆ ಬಳ್ಪ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಮೂಲ್ಕಿ: ನ್ಯಾಯಾಧೀಶರ ಮನೆಯಲ್ಲಿ ಕಳ್ಳತನಕ್ಕೆ ಯತ್ನ!
ಬಳ್ಪ ಗ್ರಾಮದ ಕುಂಜತ್ತಾಡಿ ಕೊಡಂಗುಳಿ ಸೋಮಪ್ಪ ಗೌಡ ಎಂಬವರ ಮನೆಯಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾಯಿ ಬೊಗಳಿದೆ.
ಶಬ್ದ ಕೇಳಿ ಮನೆಯಲ್ಲಿದ್ದ ಸೋಮಪ್ಪ ಗೌಡರ ಅತ್ತಿಗೆ ಸಾವಿತ್ರಿಯವರು ಮನೆಯಿಂದ ಹೊರಗೆ ಬಂದಾಗ ಕೊಟ್ಟಿಗೆ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ ನಿಂತಿದ್ದ.
ಆತನೊಂದಿಗೆ ವಿಚಾರಿಸಿದಾಗ ಯಾವುದೇ ಉತ್ತರ ನೀಡಲಿಲ್ಲವೆನ್ನಲಾಗಿದೆ. ಮಹಿಳೆ ಸೀದಾ ಮನೆಗೆ ಹೋಗಿ ಕೋವಿ ಹಿಡಿದುಕೊಂಡು ಬಂದಿದ್ದಾರೆ.
ಈ ವೇಳೆ ಸಮೀಪದಲ್ಲೇ ಮತ್ತೊಬ್ಬ ಕೂಡಾ ನಿಂತಿದ್ದ ಎನ್ನಲಾಗಿದೆ. ಕೋವಿ ಹಿಡಿದು ಮಹಿಳೆ ಮುನ್ನುಗ್ಗಿದಾಗ ಇಬ್ಬರೂ ಓಡಿದರೆಂದು, ಸ್ವಲ್ಪ ದೂರ ಮಹಿಳೆ ಕೂಡಾ ಅವರನ್ನು ಓಡಿಸಿದರೆಂದು ತಿಳಿದು ಬಂದಿದೆ.