ಉಡುಪಿ:(ಫೆ.6) ಕಿರಿಮಂಜೇಶ್ವರ ಗ್ರಾಮದ ನಾಗೂರು ಶೆಟ್ರಹಿತ್ಲು ಎಂಬಲ್ಲಿ ರೈಲು ಢಿಕ್ಕಿ ಹೊಡೆದ ಪರಿಣಾಮ ಯುವಕರ್ನೋವ ಮೃತಪಟ್ಟ ಘಟನೆ ನಡೆದಿದೆ.
ಇದನ್ನೂ ಓದಿ: ಪುತ್ತೂರು: ದೇವಾಲಯದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕಟ್ಟಡ ಧ್ವಂಸ ಆರೋಪ
ಮೃತರನ್ನು ಬಿಜೂರು ಗ್ರಾಮದ ವಾಸುದೇವ(25) ಎಂದು ಗುರುತಿಸಲಾಗಿದೆ. ಇವರು ಸೆಂಟ್ರಿಂಗ್ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದು, ದಾರಿ ಮಧ್ಯೆ ಕೊಂಕಣ ರೈಲು ಹಳಿಯನ್ನು ದಾಟುತ್ತಿರುವಾಗ
ಮಂಗಳೂರು ಕಡೆಯಿಂದ ಮಡಗಾಂವ್ ಕಡೆಗೆ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ವಾಸುದೇವ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.