Sun. Feb 23rd, 2025

Guruvayankare: ಇತಿಹಾಸ ಪ್ರಸಿದ್ಧ ಅರಮಲೆ ಬೆಟ್ಟದಲ್ಲಿ ವಾರ್ಷಿಕ ಜಾತ್ರೆ : ಮಾಹಿತಿ-ಸೇವೆಗಾಗಿ ಕಾರ್ಯಾಲಯ ಉದ್ಘಾಟನೆ..!

ಗುರುವಾಯನಕೆರೆ :(ಫೆ.7) ಇತಿಹಾಸ ಪ್ರಸಿದ್ದ ಅರಮಲೆ ಬೆಟ್ಟದ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಫೆ. 9 ರಿಂದ 13ರವರೆಗೆ ಬ್ರಹ್ಮಕುಂಭಾಭಿಷೇಕ ಮತ್ತು ವಾರ್ಷಿಕ ಜಾತ್ರೆ ನಡೆಯಲಿದೆ.

ಇದನ್ನೂ ಓದಿ: ಶಿರ್ಲಾಲು : ಮುರುಕಲು ಮನೆಯಿಂದ ನೂತನ ಮನೆಗೆ ಶಿರ್ಲಾಲಿನ ಸುಂದರ

ಈ ನಿಟ್ಟಿನಲ್ಲಿ ಇಂದು ನೂತನ ಕಾರ್ಯಾಲಯ ಉದ್ಘಾಟನೆಗೊಂಡಿತು. ಸಾಯಿಕುಮಾರ್ ಶೆಟ್ಟಿ ಬರೋಡಾ ಇವರು ನೂತನ ಕಾರ್ಯಾಲಯವನ್ನು ಉದ್ಘಾಟನೆಗೊಳಿಸಿದರು.

ದೈವಸ್ಥಾನದ ಮುಂಭಾಗದಲ್ಲಿರುವ ಈ ಕಾರ್ಯಾಲಯ ಬ್ರಹ್ಮಕುಂಭಾಭಿಷೇಕ ಮತ್ತು ವಾರ್ಷಿಕ ಜಾತ್ರೆಯವರೆಗೆ ಕಾರ್ಯಾಚರಿಸಲಿದೆ. 22 ಮಂದಿ ಈ ಕಾರ್ಯಾಲಯದಲ್ಲಿ ಶಿಫ್ಟ್ ಮೂಲಕ ಸೇವೆ ಮಾಡಲಿದ್ದಾರೆ ಎಂದು ಕಾರ್ಯಾಲಯ ಸಮಿತಿಯವರು ಮಾಹಿತಿ ನೀಡಿದರು.

ಈ ಕಾರ್ಯಾಲಯದಲ್ಲಿ ಭಕ್ತರು ದೈವಸ್ಥಾನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಕೇಳಬಹುದಾಗಿದೆ. ಅಲ್ಲದೇ, ವಿವಿಧ ರೀತಿಯ ಸೇವೆಗಳು, ದೇಣಿಗೆ, ಅನ್ನಸಂತರ್ಪಣೆಗೆ ದೇಣಿಗೆಯನ್ನು ಭಕ್ತರು ಇಲ್ಲಿ ನೀಡಬಹುದಾಗಿದೆ.

ಈ ವೇಳೆ ಕೊಡಮಣಿತ್ತಾಯ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸುಕೇಶ್ ಕಡಂಬು, ಪ್ರವೀಣ್ ಕುಮಾರ್ ಅಜ್ರಿ, ಸುಮಂತ್ ಕುಮಾರ್ ಜೈನ್ , ಪುರಂದರ ಶೆಟ್ಟಿ, ವಾತ್ಸಲ್ಯ, ಪ್ರದೀಪ್ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *