ಪುತ್ತೂರು:(ಫೆ.7) ಹೊಸಮನೆ ಕ್ರಿಕೆಟರ್ಸ್ ನಿಂದ ಆರ್ಯಾಪು ಇದರ ವತಿಯಿಂದ ಎರಡು ದಿನಗಳ ಕಾಲ ಕಾರ್ಪಾಡಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಯಾಪು ಪ್ರೀಮಿಯರ್ ಲೀಗ್ ಸೀಸನ್-1ರ ಕ್ರಿಕೆಟ್ ಪಂದ್ಯಾಟಕ್ಕೆ ಫೆ.6 ರಂದು ಚಪ್ಪರ ಮುಹೂರ್ತ ನೆರವೇರಿತು.

ಇದನ್ನೂ ಓದಿ: Tamil Nadu: ರೈಲಿನಲ್ಲಿ ಗರ್ಭಿಣಿಗೆ ಲೈಂಗಿಕ ಕಿರುಕುಳ
ಅರ್ಚಕ ಸಂದೀಪ್ ಕಾರಂತ ಪೂಜಾ ವಿಧಿ ವಿಧಾನ ನೆರವೇರಿಸಿದರು. ಹೊಸಮನೆ ಕ್ರಿಕೆಟರ್ಸ್ ನ ಅಧ್ಯಕ್ಷ ಧನುಷ್ ಹೊಸಮನೆ, ಕಾರ್ಯದರ್ಶಿ ಪವನ್ ಶೆಟ್ಟಿ ಕಂಬಳತ್ತಡ್ಡ,



ಉಪಾಧ್ಯಕ್ಷರಾದ ಉಮೇಶ್ ಎಸ್.ಕೆ., ಫಿಕ್ಸೆಲ್ ಕ್ರಿಯೆಟಿವ್ ನ ಪ್ರಜ್ವಲ್ ಎಂ.ಎಸ್., ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ, ಜತೆ ಕಾರ್ಯದರ್ಶಿ ಯತೀಶ್ ಪಿ.ಕೆ., ಸದಸ್ಯರಾದ ಸೃಜನ್ ರೈ, ಹರಿಪ್ರಸಾದ್, ಶ್ರೇಯಸ್ ರೈ ಸೇರಿದಂತೆ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

