Sun. Feb 23rd, 2025

Udupi: ವಿಡಿಯೋ ಕಾಲ್ ನಲ್ಲಿ ಮಗಳ ಮುಖ ನೋಡಿ ಮಲಗಿದ ತಂದೆ – ಕಾಪು ಮೂಲದ ಯುವಕ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತ್ಯು

ಉಡುಪಿ:(ಫೆ.7) ಉಡುಪಿ ಜಿಲ್ಲೆಯ ಕಾಪು ಮೂಲದ ಯುವಕನೋರ್ವ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಂಟ್ವಾಳ : ಫರಂಗಿಪೇಟೆ ಶ್ರೀ ಕೊರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಅನುದಾನದ ಡಿ.ಡಿ. ಹಸ್ತಾಂತರ

ಮೃತರನ್ನು ಮೊಹಮ್ಮದ್ ಇರ್ಫಾನ್ (37) ಎಂದು ಗುರುತಿಸಲಾಗಿದೆ. ಇವರು ಸೌದಿಅರೇಬಿಯಾದ ಜಿದ್ದಾದಲ್ಲಿ ಹರಾಜ್ ಸಯ್ಯಾರ್ (ವಾಹನ ಹರಾಜ್ ಯಾರ್ಡ್) ಬಳಿಯ ಯಾಂತ್ರಿಕ ಕಾರ್ಯಗಾರವೊಂದರಲ್ಲಿ ಕೆಲಸ ಮಾಡುತ್ತಿದ್ದರು.


ಕೆಲಸ ಮುಗಿಸಿ ಬಂದು ರಾತ್ರಿ ರೂಮ್ ನಲ್ಲಿ ಮಲಗಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸೌದಿಯಲ್ಲಿ ಇರುವ ಸ್ಥಳೀಯ ಅನಿವಾಸಿ ಭಾರತೀಯರು ಹಾಗೂ ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ.

ಈತನಿಗೆ 4 ತಿಂಗಳ ಮಗುವಿದ್ದು ಮಧ್ಯರಾತ್ರಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಮಗಳನ್ನ ತೋರಿಸಲು ಹೇಳಿ ಮಗಳ ಮುಖವನ್ನು ನೋಡಿ ಮಲಗಿದ್ದರು. ಈ ಯುವಕ ಹಠಾತ್ ಸಾವಿಗೀಡಾಗಿದ್ದರಿಂದ ಆತನ ಕುಟುಂಬ ಆಘಾತಕ್ಕೊಳಗಾಗಿದೆ.

Leave a Reply

Your email address will not be published. Required fields are marked *