ಬೆಳ್ತಂಗಡಿ :(ಫೆ.8) ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ಎರಡು ಬೈಕ್ ನಲ್ಲಿ ಬಂದ ಅಪರಿಚಿತರು ಮೀನು ಸಾಗಾಟದ ಲಾರಿ ತಡೆದು ನಗದು ದೋಚಿದ ಘಟನೆ ವರದಿಯಾಗಿದೆ.

ಇದನ್ನೂ ಓದಿ: ಮುಂಬೈ: ಹಾಸ್ಟೆಲ್ ಗೆಳೆಯನಿಗೆ 500 ಕೋಟಿ ಆಸ್ತಿ ಬರೆದಿಟ್ಟ ರತನ್ ಟಾಟಾ
ಲಾರಿ ಚಾಲಕನ ಬದಿಯ ಗ್ಲಾಸ್ ಒಡೆದು ಚಾಲಕನಿಗೆ ಥಳಿಸಿ 1.61 ಲಕ್ಷ ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ವಾಹನದ ಚಾಲಕ ಸಲಾಂ ಬಣಕಲ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿದ್ದಾನೆ.

ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.



