Dhananjay :(ಫೆ.8) ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಅವರು ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಹೀಗಾಗಿ ಕನ್ನಡದ ಎಲ್ಲ ನಟ-ನಟಿಯರಿಗೆ, ಹಿರಿಯರಿಗೆ ಮನೆ ಮನೆಗೆ ತೆರಳಿ ಮದುವೆಯ ಆಮಂತ್ರಣವನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನವಗ್ರಹ ಸಿನಿಮಾದ “ಶೆಟ್ಟಿ” ಖ್ಯಾತಿಯ ನಟ ಗಿರಿ ದಿನೇಶ್ ನಿಧನ
ಆದರೆ ಅಚ್ಚರಿ ಎಂಬಂತೆ ಧನಂಜಯ್ ಅವರು ದರ್ಶನ್ ಅವರಿಗೆ ಆಮಂತ್ರಣವನ್ನೇ ನೀಡಿಲ್ಲ. ಇದು ಕೆಲವು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರೆ ಇನ್ನು ಕೆಲವರಿಗೆ ಬೇಸರ ಉಂಟುಮಾಡಿದೆ. ಸದ್ಯ ಇದೀಗ ಡಾಲಿ ಧನಂಜಯ್ ಅವರೇ ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.



ಡಾಲಿ ಧನಂಜಯ್ ಎಲ್ಲರನ್ನೂ ಮದುವೆಗೆ ಕರೆದಿದ್ದಾರೆ. ದರ್ಶನ್ ಅವರನ್ನು ಯಾಕೆ ಕರೆದಿಲ್ಲ ಅನ್ನೋದೇ ಈಗ ಪ್ರಶ್ನೆ ಆಗಿದೆ. ಅದಕ್ಕೆ ಕಾರಣ ಏನೂ ಅನ್ನೋದನ್ನು ಸಧ್ಯ ಧನಂಜಯ್ ಅವರು ಹೇಳಿಕೊಂಡಿದ್ದಾರೆ.

ಪ್ರೆಸ್ ಮೀಟ್ ಮಾಡಿದ್ದರು. ಈ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದರು. ” ದರ್ಶನ್ ಅವರನ್ನ ರೀಚ್ ಅಗೋಕೆ ಆಗ್ಲೇ ಇಲ್ಲ. ಅವರಿಗೂ ಮದುವೆ ಆಮಂತ್ರಣ ಕೊಡಬೇಕು ಅಂತ ಇತ್ತು. ಆದರೆ, ಅದು ಸಾಧ್ಯವಾಗ್ಲಿಲ್ಲ. ಹಾಗಾಗಿಯೇ ಈ ವೇದಿಕೆ ಮೂಲಕ ಅವರನ್ನ ಆಹ್ವಾನಿಸುತ್ತೇನೆ” ಎಂದು ಹೇಳಿದ್ದಾರೆ.
