Sun. Feb 23rd, 2025

Mangalore: ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ

ಮಂಗಳೂರು:(ಫೆ.8) ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಸಂದರ್ಭದಲ್ಲಿಯೇ ಗಮನಾರ್ಹ ಸಾಧನೆಯನ್ನು ಮಾಡಿ ಹೆಸರು ಮಾಡಿರುವ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಕ ಉದ್ಯೋಗ ಕ್ರಾಂತಿಯನ್ನೇ ಸೃಷ್ಟಿಸಲು ಮುಂದಾಗಿದೆ.

ಇದನ್ನೂ ಓದಿ: ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ತೊಡಕು ಹಿನ್ನೆಲೆ


2015ರಲ್ಲಿ ಆರಂಭವಾಗಿ ಕಂಪ್ಯೂಟರ್ ಸೇವೆಯ ಮೂಲಕ ಆರಂಭವಾದ ಸಂಸ್ಥೆ 2019ರಲ್ಲಿ ಕಾರ್ಪೋರೇಟ್ ಜಗತ್ತಿಗೆ ಕಾಲಿಟ್ಟಿತ್ತು. ಹಲವಾರು ಸರ್ಕಾರಿ ಹಾಗೂ ಎಂಎನ್ ಸಿ ಕಂಪನಿಗಳು ಸೇರಿದಂತೆ ಪ್ರತಿಷ್ಠಿತ ಇಂಡಿಯನ್ ನೆವಿ, ಕೈಗಾ ಅಣುಸ್ಥಾವರ, ಎಂಆರ್ ಪಿಎಲ್ ನಂತಹ ಪ್ರತಿಷ್ಠಿತ ಕಾರ್ಯ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಸೇವೆಯನ್ನು ಮಾಡಿ ಗುರುತಿಸಿಕೊಂಡದ್ದು ಅದಲ್ಲದೆ ಇತರೆ ಸಂಸ್ಥೆಗಳಿಗೂ ತಾಂತ್ರಿಕ ಸೇವೆಯನ್ನು ನೀಡುತ್ತಿದೆ.


ಸಂಸ್ಥೆ ಕಳೆದ ಮೂರು ವರ್ಷಗಳಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದುಇದೀಗ ಜನಸಾಮಾನ್ಯರಿಗೂ AI ತಂತ್ರಜ್ಞಾನವನ್ನು ತಲುಪಿಸಲು ಮುಂದಾಗಿದೆ. ಈ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯಮಿಗಳು ಸೇರಿದಂತೆ 33 ಕ್ಷೇತ್ರಗಳಿಗೆ AI ಪರಿಚಯಿಸಲಾಗುತ್ತಿದೆ.


ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮನ್ನು ತಾವು ಒಡ್ಡಿಕೊಳ್ಳುವುದರ ಜೊತೆಗೆ ಭವಿಷ್ಯದ ಕನಸನ್ನು ಕಾಣುವ ವಿದ್ಯಾವಂತ ಯುವಕ/ ತಿಯರಿಗಾಗಿ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉದ್ಯೋಗಾವಕಾಶವನ್ನು ತೆರೆದಿಡುತ್ತಿದೆ.


1020 ಉದ್ಯೋಗಾವಕಾಶ:


ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ರಾಜ್ಯದ ಜನರಿಗೆ ಪರಿಚಯಿಸುವ ಅತೀ ದೊಡ್ಡ ಯೋಜನೆಯಲ್ಲಿ ಯುವಕ/ತಿಯರಿಗೆ ರಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಸುವರ್ಣಾವಕಾಶ ಎಂದೇ ಹೇಳಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲೋಕದಲ್ಲಿ ಹೊಸತನದ ಜೊತೆಗೆ ವಿಭಿನ್ನ ಅನುಭವವನ್ನು ಪಡೆದುಕೊಳ್ಳಲು ಒಟ್ಟು 1020 ಮಂದಿಗೆ ಉದ್ಯೋಗಾವಕಾಶ ಲಭ್ಯವಿದೆ.


ಆಕರ್ಷಕ ವೇತನ:

ಉದ್ಯೋಗಕಾಂಶಿಗಳು ತಿಂಗಳಿಗೆ ರೂ. 25,000 ರಿಂದ ರೂ. 30,000 ದವರೆಗಿನ ವೇತನವನ್ನು ಪಡೆದುಕೊಳ್ಳಲಿದ್ದಾರೆ.


ನಿಮ್ಮ ತಾಲೂಕಿನಿಂದಲೇ ಕೆಲಸ ಮಾಡಲು ಅವಕಾಶ :


ಪ್ರತಿ ತಾಲೂಕಿನಿಂದ ಕ್ರಮವಾಗಿ ನಾಲ್ವರನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೊದಲ 6 ತಿಂಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಬಗ್ಗೆ ಜಾಗೃತಿ ಮೂಡಿಸಲು ಆಯ್ಕೆಯಾದ ಅಭ್ಯರ್ಥಿಗಳು ಫೀಲ್ಡ್ ನಲ್ಲಿದ್ದು ಕಾರ್ಯ ನಿರ್ವಹಿಸಲು ಸಿದ್ಧವಿರಬೇಕು. ಫೀಲ್ಡ್ ನಲ್ಲಿ ಕೆಲಸ ನಿರ್ವಹಿಸಿ ಅನುಭವ ಪಡೆದುಕೊಂಡ ಬಳಿಕ ಅವರನ್ನು ಸಂಸ್ಥೆಯ ಖಾಯಂ ಉದ್ಯೋಗಿಯಾಗಿ ಕಚೇರಿಗೆ ನೇಮಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ…?


ಆಯ್ಕೆ ಪ್ರಕ್ರಿಯೆಯು 4 ಹಂತಗಳಲ್ಲಿ ನಡೆಯಲಿದ್ದು,

  • Aptitude test
  • ಗ್ರೂಪ್ ಡಿಸ್ಕಶನ್
  • ಟೆಕ್ನಿಕಲ್ ರೌಂಡ್
  • ಎಚ್ ಆರ್ ರೌಂಡ್

ಸಂದರ್ಶನ ಎಲ್ಲಿ ನಡೆಯುತ್ತೆ..?


ದಕ್ಷಿಣ ಕನ್ನಡ ಜಿಲ್ಲೆಯ ಸಂದರ್ಶನವನ್ನು ಫೆ.12, 2025ರಂದು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ನಡೆಯುವ ಸಂದರ್ಶನವನ್ನು ಫೆ.13, 2025ರಂದು ಮಾಹೆ (ಮಣಿಪಾಲ ಯೂನಿವರ್ಸಿಟಿ) ವಾಣಿಜ್ಯ ವಿಭಾಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.


ಪ್ರತಿ ಜಿಲ್ಲಾ ಕೇಂದ್ರದಲ್ಲೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯಾ ತಾಲೂಕಿನ ಅಭ್ಯರ್ಥಿಗಳು ಈ ಲಿಂಕ್ ಮೂಲಕ ನೋಂದಾಯಿಸಿ ವಾಟ್ಸಾಪ್ ಮೂಲಕ ಆಯಾ ಜಿಲ್ಲೆಗಳ ಸಂದರ್ಶನದ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಲಿಂಕ್ :

https://forms.gle/hCAfYmRnH2rtjWUv6

(ಸೂಚನೆ: ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ರೆಸ್ಯೂಮ್, ಆಧಾರ್ ಕಾರ್ಡ್ ದಾಖಲಾತಿಗಳು ಕಡ್ಡಾಯ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ದೂರವಾಣಿ ಸಂಖ್ಯೆ: 7349740777
ಇಮೇಲ್: career@yaticorp.com

ವೆಬ್‌ಸೈಟ್

www.yaticorp.com

Leave a Reply

Your email address will not be published. Required fields are marked *