ಉಜಿರೆ(ಫೆ.08) ( ಯು ಪ್ಲಸ್ ಟಿವಿ): ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ),

ಬೆಳ್ತಂಗಡಿ ತಾಲೂಕು ಪಂಚಾಯತ್ ನ ಆಶ್ರಯದಲ್ಲಿ ಉಜಿರೆ ಗ್ರಾಮ ಪಂಚಾಯತ್ ನ ಸಹಯೋಗದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾದ ಒಣ ತ್ಯಾಜ್ಯದಲ್ಲಿ “ಮರು ಬಳಕೆಯಾಗದ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಡಾಮರು ರಸ್ತೆ ನಿರ್ಮಾಣ” ಕುರಿತಾಗಿ ಪ್ರಾಯೋಗಿಕ ತರಬೇತಿ ಕಾರ್ಯಾಗಾರ ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಫೆ.7 ರಂದು ನಡೆಯಿತು.

ಪಂಚಾಯತ್ ಗಳಲ್ಲಿ ಒಣ ತ್ಯಾಜ್ಯ ಸಂಗ್ರಹವಾದಾಗ ಮರುಬಳಕೆಯಾಗದ ಪ್ಲಾಸ್ಟಿಕ್ ಅನ್ನು ಉಪಯೋಗಿಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಡಾಂಬರೀಕರಣ ಮಾಡುವ ಒಟ್ಟು ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಇಡೀ ರಾಜ್ಯದ 31 ಜಿಲ್ಲಾ ಪಂಚಾಯತ್ ಗಳ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿಗಳು ಮತ್ತು ಸಮಾಲೋಚಕರು ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಹಾಗೂ ಸೇರಿದಂತೆ ವಿವಿಧ ಇಲಾಖೆಯ ಕಾರ್ಯಪಾಲಕ ಅಭಿಯಂತರರು,
ಉಜಿರೆಯ ಅತ್ತಾಜೆಯಲ್ಲಿರುವ ಎಂ. ಆರ್. ಎಫ್ ಘಟಕಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ಪ್ಲಾಸ್ಟಿಕ್ ಅನ್ನು ಡಾಂಬರೀಕರಣಕ್ಕೆ ಬಳಸಲಾಗುವ ಬಗ್ಗೆ ಮುಗ್ರೋಡಿ ಕನ್ಸ್ಟ್ರಕ್ಷನ್ ನ ಘಟಕಕ್ಕೆ ಭೇಟಿ ನೀಡಿ ಡಾಮರು ಮಿಶ್ರಿಕರಣದ ಬಗ್ಗೆ ಮಾಹಿತಿ ಪಡೆದರು. ಬಳಿಕ ಪ್ಲಾಸ್ಟಿಕ್ ನಿಂದ ಡಾಮರೀಕರಣ ಮಾಡುವ ಪ್ರಾಯೋಗಿಕ ಪರೀಕ್ಷೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿ/ನೋಡಲ್ ಅಧಿಕಾರಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ ) ಜಯಲಕ್ಷ್ಮಿ ರಾಯಕೂಡ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಎನ್, ರಾಜ್ಯ ಕಚೇರಿಯ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸೀಮಾ ನಾಯಕ್,

ವಿನಯಾ ಸ್ಟೇಟ್ ಕನ್ಸಲ್ಟೆಂಟ್, ಎಕ್ಸಿಕ್ಯೂಟಿವ್ ಇಂಜಿನಿಯರ್ ರಘುನಾಥ್, ವೇಣುಗೋಪಾಲ್, ತಾಲೂಕು ಇಂಜಿನಿಯರ್ ನಿತಿನ್ ಕುಮಾರ್, ಜಗದೀಶ್ , ಸಂದೀಪ್, ಪಿಡಿಓ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಶ್ರವಣ್ ಕುಮಾರ್, ಮಂಗಳ ರಿಸೋರ್ಸ್ ನಿಂದ ಸಚಿನ್ ಕುಮಾರ್, ಉಜಿರೆಯ ಎಂ.ಆರ್ .ಎಫ್ ನ ಆಪರೇಟರ್ ವೈಷ್ಣವಿ ಇಂಡಸ್ಟ್ರೀಸ್ ನ ಸುದೇಶ್ ಕಿಣಿ, ಶರತ್ ಕುಮಾರ್,

ಜಿಲ್ಲಾ ಪಂಚಾಯತ್ ನ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)ದ ನೆರವು ಘಟಕದ ನವೀನ್ ಕೊಣಾಜೆ , ಪವನ್ ಶೆಟ್ಟಿ , ಡೊoಬಯ್ಯ ಇಡ್ಕಿದು ನರೇಗಾ ಯೋಜನೆ ADPC, ಇಂಜಿನಿಯರ್, IEC ಸಂಯೋಜಕರು ಸೇರಿದಂತೆ ವಿವಿಧ ಇಲಾಖೆಯ ಪಾಲ್ಗೊಂಡಿದ್ದರು.
