ಮಧ್ಯಪ್ರದೇಶ:(ಫೆ.10) ಸಂಬಂಧಿಯ ಮದುವೆ ಸಮಾರಂಭದಲ್ಲಿ ವೇದಿಕೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ರೆಸಾರ್ಟ್ವೊಂದರಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಯುವತಿ ಖುಷಿ ಖುಷಿಯಿಂದ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಳು, ಏಕಾಏಕಿ ಕುಸಿದುಬಿದ್ದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Ullal: ಕಪ್ಪೆ ಚಿಪ್ಪು ಹೆಕ್ಕಲು ನೇತ್ರಾವತಿ ನದಿಗಿಳಿದ ವ್ಯಕ್ತಿ ಸಾವು !!
ವಿಡಿಯೋದಲ್ಲಿ ಸೀರೆಯುಟ್ಟ ಯುವತಿ ಬಾಲಿವುಡ್ನ ಲೆಹ್ರಾ ಕೆ ಬಲ್ಖಾ ಕೆ ಹಾಡಿಗೆ ನೃತ್ಯ ಮಾಡುತ್ತಿದ್ದಳು, ಇದ್ದಕ್ಕಿಂದ್ದಂತೆ ಕುಸಿದುಬೀಳುವುದನ್ನು ಕಾಣಬಹುದು. ವಿವರಗಳ ಪ್ರಕಾರ,ಮೃತಳನ್ನು ಪರಿಣಿತಾ ಜೈನ್ ಎಂದು ಗುರುತಿಸಲಾಗಿದೆ. ಅವರು ಇಂದೋರ್ ನಿವಾಸಿಯಾಗಿದ್ದರು. ಸೋದರಸಂಬಂಧಿಯ ಸಹೋದರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ವಿದಿಶಾಗೆ ಬಂದಿದ್ದರು. ‘ಹಲ್ದಿ’ ಕಾರ್ಯಕ್ರಮದ ಸಮಯದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.


ಸಮಾರಂಭದಲ್ಲಿ ಹಾಜರಿದ್ದ ವೈದ್ಯರು ಕೂಡಲೇ ಸಿಪಿಆರ್ ನೀಡಿದ್ದಾರೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ಪರಿಣಿತಾ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು.

ಆಕೆ ಎಂಬಿಎ ಪದವೀಧರೆಯಾಗಿದ್ದು, ಇಂದೋರ್ನಲ್ಲಿ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ಆಕೆಯ ಕಿರಿಯ ಸಹೋದರಿ ತನ್ನ 12ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಳು.

ಮದುವೆ ಮನೆಗಳಲ್ಲಿ ಊಟ ಸರಿಯಾಗಿ ಮಾಡದೆ, ನೀರನ್ನು ಸರಿಯಾಗಿ ಕುಡಿಯದೇ, ಅತಿಯಾದ ದೈಹಿಕ ಚಟುವಿಕೆ, ನೃತ್ಯಾಭ್ಯಾಸದಿಂದ ಕೂಡ ಹೃದಯ ಸಂಕುಚಿತಗೊಳ್ಳಬಹುದು ಎಂದು ವೈದ್ಯರು ಹೇಳುತ್ತಾರೆ.
