ಬಿಹಾರ: (ಫೆ.11) ಗಂಡ ಹೆಂಡತಿಯ ಜಗಳ ಉಂಡು ಮಲಗುವವರೆಗೂ ಎಂಬ ಗಾದೆಯೇ ಇದೆ. ಆದ್ರೆ ಇಲ್ಲೊಂದು ಘಟನೆ ಗಂಡ ಹೆಂಡತಿಯ ಜಗಳ ದಂಡ ಕಟ್ಟುವವರೆಗೆ ಹೋಗಿದೆ. ಬಿಹಾರದ ಪತಿ ಪತ್ನಿಯರ ಜಗಳ ಡಿವೋರ್ಸ್ ವರೆಗೆ ಹೋಗಿದ್ದು, ಅದು ಕೋರ್ಟ್ನಲ್ಲಿ ಇನ್ನೂ ವಿಚಾರಣೆ ಹಂತದಲ್ಲಿದೆ.

ಇದನ್ನೂ ಓದಿ: ಬೆಳ್ತಂಗಡಿ: ಯಕ್ಷಭಾರತಿ ದಶಮಾನೋತ್ಸವ
ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ಫೈನ್ ಬೀಳುತ್ತೆ ಎಂಬ ಕಾರಣಕ್ಕೆ ಹೆಚ್ಚಿನವರು ಬಹಳ ಜಾಗರೂಕರಾಗಿ, ಟ್ರಾಫಿಕ್ ನಿಯಮಗಳನ್ನೆಲ್ಲಾ ಪಾಲನೆ ಮಾಡುತ್ತಾ ವಾಹನ ಚಲಾಯಿಸುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಬೇಕು ಬೇಕಂತಲೇ ವಾಹನವನ್ನು ಅಡ್ಡಾದಿಡ್ಡಿ ಓಡಿಸುವ ಮೂಲಕ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ.

ಜಗಳವಾಡಿ ತಾಯಿ ಮನೆ ಸೇರಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ ಹೆಂಡ್ತಿಯ ವಿರುದ್ಧ ಸೇಡು ತೀರಿಸಲು ಆತ ಈ ರೀತಿ ಮಾಡಿದ್ದು, ಹೆಂಡ್ತಿ ಹೆಸರಲ್ಲಿ ನೋಂದಾಯಿಸಲಾದ ದ್ವಿಚಕ್ರ ವಾಹನವನ್ನು ಬೇಕು ಬೇಕಂತಲೇ ಅಡ್ಡಾದಿಡ್ಡಿ ಓಡಿಸಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಮೂಲಕ ಆಕೆಯ ಕೈಯಿಂದಲೇ ಫೈನ್ ಕಟ್ಟುವಂತೆ ಮಾಡಿ ಸೇಡು ತೀರಿಸಿಕೊಂಡಿದ್ದಾನೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.


ಹೀಗೆ ಹೆಂಡ್ತಿಯ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಆ ಮಹಿಳೆಯ ಗಂಡ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾದ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾ ಉದ್ದೇಶಪೂರ್ವಕವಾಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ. ಅನೇಕ ಸಲ ಮಹಿಳೆ ತಾನೇ ಫೈನ್ ಕಟ್ಟಿದ್ದು, ನಂತರ ಗಂಡನ ಕಿತಾಪತಿ ತಾಳಲಾರದೆ ವಾಹನವನ್ನು ಹಿಂತಿರುಗಿಸುವಂತೆ ಗಂಡನ ಬಳಿ ಕೇಳಿಕೊಂಡಿದ್ದಾರೆ.

ಡಿವೋರ್ಸ್ ಸಿಗುವವರೆಗೆ ಸ್ಕೂಟಿ ಹಿಂತಿರುಗಿಸುವುದಿಲ್ಲ ಎಂದು ಆತ ಹೇಳಿದ್ದು, ಬಳಿಕ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಸದ್ಯ ಈ ವಿಚಿತ್ರ ಕೇಸ್ ಬಗ್ಗೆ ತನಿಖೆ ನಡೆಯುತ್ತಿದ್ದು, ಮಹಿಳೆಗೆ ತನ್ನ ಸ್ಕೂಟಿ ವಾಪಸ್ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.
