ಪುತ್ತೂರು:(ಫೆ.11) ಕರ್ತವ್ಯ ನಿರತ ಪೊಲೀಸ್ ಉಪನಿರೀಕ್ಷಕರ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಪ್ರತಾಪ್ ಗೌಡ ಎಂಬವರ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾಸನ : ಕಾಫಿ ದರ ಏರಿಕೆ
ಪುತ್ತೂರು ತಾಲೂಕಿನ ಆರ್ಯಾಪುರ್ ಗ್ರಾಮದ ಸಂಪ್ಯ ಪುತ್ತೂರು ಗ್ರಾಮಾಂತರ ಠಾಣೆಯ ಎದುರು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ, ಹಿಂಬದಿ ಸವಾರ ಹೆಲ್ಮೆಟ್ ಧರಿಸದೇ ಇರುವ ಕಾರಣಕ್ಕಾಗಿ ರೇಮಂತ್ ಎಸ್ ಎಂಬವರ ಸ್ಕೂಟರ್‌ರನ್ನು ತಡೆದು,


ದಂಡ ಪಾವತಿಸುವಂತೆ ಹೇಳಿದಾಗ ಸ್ಕೂಟರ್ ನ ಹಿಂಬದಿ ಕುಳಿತಿದ್ದ ಪ್ರತಾಪ್ ಗೌಡ ಎಂಬಾತ ಕೆಳಗಿಳಿದು ಬಂದು ಪೋಲಿಸ್ ಅಧಿಕಾರಿಗಳಿಗೆ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಪೊಲೀಸ್ ಅಧಿಕಾರಿ ಸಿಬ್ಬಂದಿಗಳೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ.


ಈತನ ಮೇಲೆ ಕಾವೂರು ಠಾಣೆಯಲ್ಲಿ ಹಾಗೂ ಪುತ್ತೂರು ಠಾಣೆಯಲ್ಲಿ ಸೇರಿ ಒಟ್ಟು ನಾಲ್ಕು ಕೇಸುಗಳು ದಾಖಲಾಗಿದ್ದು, ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
