ಸುಳ್ಯ:(ಫೆ.11) ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಕನಕಮಜಲುವಿನಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾದ ಕಾರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಕಾಂಗ್ರೆಸ್ ಶಾಸಕನ ಪುತ್ರನ ಮಿತಿ ಮೀರಿದ ದರ್ಪ
ಪುತ್ತೂರು ಬೆಟ್ಟಂಪಾಡಿಯ ರಾಮಯ್ಯ ರೈ ಮತ್ತು ಕನಕಮಜಲಿನ ಜನಾರ್ದನ ರೈ ಅವರು ಫೆ. 8ರಂದು ರಾತ್ರಿ ನಡೆದ ಕಾರು ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಫೆ. 9ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತರಾಗಿದ್ದರು.



ಅಪಘಾತ ಎಸಗಿದ ಕಾರು ಚಾಲಕ ಘಟನ ಸ್ಥಳದಲ್ಲಿ ನಿಲ್ಲಸದೆ ಸುಳ್ಯದ ಕಡೆಗೆ ಚಲಾಯಿಸಿಕೊಂಡು ಹೋಗಿದ್ದು, ಈ ಕೃತ್ಯವೆಸಗಿದ ಕಾರಿನ ಪತ್ತೆ ಕಾರ್ಯ ಆರಂಭಿಸಿದ ಸುಳ್ಯ ಪೊಲೀಸರು ಅಪಘಾತ ಎಸಗಿದ್ದು ಇಕೋ ಕಾರು ಎನ್ನುವುದನ್ನು ಪತ್ತೆ ಮಾಡಿದ್ದರು ಎನ್ನಲಾಗಿದೆ.

ಈ ಕಾರು ಸುಳ್ಯದ ಬೀರಮಂಗಲ ನಿವಾಸಿಯದ್ದು ಎಂದು ತಿಳಿದುಬಂದಿದೆ.
