Mon. Feb 24th, 2025

Ujire: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾಹಬ್ಬ 2025

ಉಜಿರೆ:(ಫೆ.11) ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಇಲ್ಲಿ ಇದೇ ಮೊದಲ ಬಾರಿಗೆ ಮಕ್ಕಳ ಸೃಜನಶೀಲತೆ ಪ್ರತಿಭೆ ಹಾಗೂ ಕಲಾ ಸಾಮರ್ಥ್ಯವನ್ನು ಪ್ರದರ್ಶಿಸಲು ಕಲಾ ಹಬ್ಬವನ್ನು ಆಚರಿಸಲಾಯಿತು.

ಇದನ್ನೂ ಓದಿ; ಸುಳ್ಯ: ಪಾದಚಾರಿಗಳಿಗೆ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ ಪ್ರಕರಣ

ಕಾರ್ಯಕ್ರಮವನ್ನು ಸಂಚಾಲಕರಾದ ವಂದನೀಯ ಫಾ. ಅಬೆಲ್ ಲೋಬೋ ಹಾಗೂ ಪ್ರಾಂಶುಪಾಲರಾದ ವಂದನೀಯ ಫಾ. ವಿಜಯ್ ಲೋಬೋ ಇವರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಚಾಲಕರು, ಕಲೆಯು ಮಕ್ಕಳಲ್ಲಿ ಅಭಿರುಚಿಯನ್ನು ಬೆಳೆಸುತ್ತದೆ ಅದನ್ನು ಪೋಷಿಸುವ ಕಾರ್ಯ ನಮ್ಮ ಶಿಕ್ಷಣ ಸಂಸ್ಥೆಯಿಂದ ಆಗುತ್ತಿದೆ.

ಮಕ್ಕಳ ಕಲಾ ಪ್ರತಿಭೆಗೆ ವೇದಿಕೆಯನ್ನು ಸಲ್ಲಿಸಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು. ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ರಚಿಸಿದ ಚಿತ್ರಕಲೆ ಹಾಗೂ ಕರಕುಶಲ ಪ್ರದರ್ಶನವನ್ನು ಅನುಗ್ರಹ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈ ಚಿತ್ರಕಲೆ ಹಾಗೂ ಕರಕುಶಲತೆಯನ್ನು ವೀಕ್ಷಿಸಿದರು. ಕಲಾ ಶಿಕ್ಷಕಿಯರಾದ ಶ್ರೀಮತಿ ಸುಮನ ಹಾಗೂ ಶ್ರೀಮತಿ ಗ್ಲೋರಿಯಾ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ವಿದ್ಯಾರ್ಥಿ ಸಾಯಿಶ್‌ ರಾಜ್ ಕಾರ್ಯಕ್ರಮದ ಮಹತ್ವವನ್ನು ತಿಳಿಸಿ, ವಿದ್ಯಾರ್ಥಿನಿ ಕುಮಾರಿ ಸರಸ್ವತಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *