Mon. Feb 24th, 2025

Belthangady: ಗೋವಿಂದೂರು ಶಾಲಾ ಬಳಿಯ ಗುಡ್ಡಕ್ಕೆ ಬೆಂಕಿ

ಬೆಳ್ತಂಗಡಿ:(ಫೆ.12) ಕಳಿಯ ಗ್ರಾಮದ ಗೋವಿಂದೂರು ಶಾಲೆಯ ಸಮೀಪದ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.

ಇದನ್ನೂ ಓದಿ: ಬಂಟ್ವಾಳ: ಜೀವನದಲ್ಲಿ ಜಿಗುಪ್ಸೆಗೊಂಡು ಅವಿವಾಹಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!!


ಗುಡ್ಡಕ್ಕೆ ಬೆಂಕಿ ಬಿದ್ದ ಕುರಿತು ಸ್ಥಳೀಯ ಕೃಷಿಕ ಆದರ್ಶ್ ಕೊರೆಯ ಎಂಬವರು ಗಮನಿಸಿದ್ದು, ಕೂಡಲೇ ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಂ ಗೇರುಕಟ್ಟೆ ರವರಿಗೆ ತಿಳಿಸಿದರು.

ಅವರು ಕೂಡಲೇ ಅಗ್ನಿಶಾಮಕ ದಳದವರಿಗೆ, ಅರಣ್ಯ ಇಲಾಖೆಯವರಿಗೆ, ಗ್ರಾಮ ಪಂಚಾಯತ್ ಗೆ ತಿಳಿಸಿದ್ದು, ಕೂಡಲೇ ಅಗ್ನಿಶಾಮಕ ದಳದವರೊಂದಿಗೆ ಅರಣ್ಯ ಇಲಾಖೆಯ‌ ಅಧಿಕಾರಿಗಳು,

ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಲು ಸಹಕರಿಸಿದರು. ಸ್ಥಳೀಯರು ಇಲಾಖೆಯವರೊಂದಿಗೆ ಸಹಕರಿಸಿ ಆಗುವ ಅಪಾಯವನ್ನು ತಪ್ಪಿಸಿದರು.

Leave a Reply

Your email address will not be published. Required fields are marked *