ಹಾಸನ (ಫೆ.12): ಪ್ರೀತಿಸಿದ ಹುಡುಗಿ ತನ್ನನ್ನ ಮದುವೆಗೆ ಆಗಲು ಒಪ್ಪಲಿಲ್ಲ ಎಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯತಮ ಸಾವನ್ನಪ್ಪಿದ್ದಾನೆ. ಹಾಸನ ಜಿಲ್ಲೆ ಅರಸೀಕೆರೆ ಬೈರಗೊಂಡನಹಳ್ಳಿಯ ದರ್ಶನ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೂರು ವರ್ಷ ಪ್ರೀತಿ ಪ್ರೇಮ ಎಂದು ಸುತ್ತಾಡಿ ಕೊನೆಗೆ ಪ್ರೇಯಸಿ ಕೈಕೊಟ್ಟಿದ್ದಕ್ಕೆ ಪ್ರಿಯಕರ ದರ್ಶನ್ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ದರ್ಶನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: ಉಡುಪಿ: 18 ವರ್ಷಗಳ ಹಳೆಯ ಪ್ರಕರಣದ ಆರೋಪಿಯ ಬಂಧನ
ಅಜ್ಜಿ ಮನೆಯಲ್ಲಿ ಇದ್ದುಕೊಂಡು ಪದವಿ ಓದುತ್ತಿದ್ದಾಗ ಪರಿಚಯವಾಗಿದ್ದ ಯುವತಿ ಜೊತೆಗೆ ಸ್ನೇಹ ಮಾಡಿದ್ದ ದರ್ಶನ್ ಆಕೆಯ ಪ್ರೀತಿಯ ಬಲೆಗೆ ಬಿದ್ದಿದ್ದ, ಪ್ರೀತಿ ಪ್ರೇಮಾ ಫ್ರೆಂಡ್ ಶಿಪ್ ಅಂತಾ ಸುತ್ತಾಡಿದ್ದ, ಮನೆಯವರಿಗೂ ವಿಚಾರ ತಿಳಿಯದಂತೆ ಕದ್ದು ಮುಚ್ಚಿ ಓಡಾಡ್ತಾ ನೀನೇ ನನ್ನ ಜೀವನ, ನೀನೇ ನನ್ನ ಜೀವಾ ಅಂತೆಲ್ಲಾ ಹೇಳಿಕೊಂಡು ಖುಷಿಯಾಗಿದ್ದ, ಆದ್ರೆ ಹುಡುಗನ ಕುಟುಂಬ ಸದಸ್ಯರು ಆರೋಪವೇನೆಂದರೆ ಹುಡುಗಿ ದರ್ಶನ್ ಜೊತೆಗೆ ಗೆಳೆತನದಲ್ಲಿದ್ದುಕೊಂಡೇ ಬೇರೊಬ್ಬ ಹುಡುಗನ ಜೊತೆ ಲವ್ವಿಡವ್ವಿ ಶುರುಮಾಡಿದ್ದಂಳತೆ. ಈ ವಿಚಾರ ತಿಳಿದ ದರ್ಶನ್ ಆಕೆಯನ್ನು ಪ್ರಶ್ನೆ ಮಾಡಿದಾಗ ಆಕೆ ನೀನು ಹೀಗೆಲ್ಲಾ ತೊಂದ್ರೆ ಕೊಟ್ಟರೆ ನಾನು ಸೂಸೈಡ್ ಮಾಡಿಕೊಳ್ಳುತ್ತೇನೆ ಹೆದರಿಸಿದ್ದಾಳಂತೆ.

ನಿನ್ನಿಂದ ನನಗೆ ಮೋಸ ಆಯ್ತು. ನಾನೇ ಬದುಕುವುದಿಲ್ಲ ಎಂದು ದರ್ಶನ್, ಫೆಬ್ರವರಿ 5ರ ಬುಧವಾರ ಮನೆಯಲ್ಲೇ ವಿಷ ಸೇವನೆ ಮಾಡಿದ್ದ. ಕೂಡಲೇ ಮನೆಯವರು ದರ್ಶನನ್ನು ಹಾಸನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಏನು ಚೇತರಿಕೆ ಕಂಡುಬರದಿದ್ದರಿಂದ ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ನಾಲ್ಕು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ದರ್ಶನ್, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ನಿತ್ಯವೂ ತನ್ನೊಟ್ಟಿಗೆ ಕಾಲೇಜಿಗೆ ಬರುತ್ತಿದ್ದ ಯುವತಿಯ ಜೊತೆಗೆ ಸ್ನೇಹ ಮಾಡಿದ್ದ ದರ್ಶನ್, ನಿತ್ಯ ಆಕೆ ಜೊತೆ ಓಡಾಡುತ್ತಿದ್ದನಂತೆ. ಇಬ್ಬರೂ ಜೊತೆಗೆ ಜೊತೆಯಾಗಿ ಓಡಾಡುತ್ತಾ ಖುಷಿ ಖುಷಿಯಾಗಿದ್ದರು. ಈ ನಡುವೆ ಮತ್ತೊಬ್ಬ ಬಂದಾಗ ಇಬ್ಬರ ನಡುವೆ ವಿರಸ ಶುರುವಾಗಿದೆ, ಪ್ರೇಮಿಗಳ ನಡುವಿನ ವಿರಸ ಪರಸ್ಪರ ಜಗಳಕ್ಕೂ ಕಾರಣವಾಗಿದೆ, ತನ್ನನ್ನ ನಂಬಿಸಿ ಹೀಗೆ ಮಾಡ್ತೀಯಾ, ಫೋನ್ ಮಾಡಲ್ಲ ಫೋನ್ ಮಾಡಿದ್ರೆ ರಿಸೀವ್ ಮಾಡಲ್ಲ, ಮೆಸೇಜ್ ಮಾಡಲ್ಲ ಎಂದು ಯುವತಿಯನ್ನ ಪ್ರಶ್ಬೆ ಮಾಡಿ ಅಸಮಾಧಾನ ಹೊರಹಾಕಿದ್ದಾನೆ. ಇದರಿಂದ ಸಿಟ್ಟಾಗಿದ್ದ ಯುವತಿ, ನೀನು ಹೀಗೆ ಮಾಡಿದ್ರೆ ನಾನು ವಿಷ ಕುಡಿಯುತ್ತೇನೆ ಎಂದು ಬೆದರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಆಘಾತಗೊಂಡಿದ್ದ ದರ್ಶನ್, ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿ ಮನೆಗೆ ಹೋಗಿ ವಿಷ ಸೇವನೆ ಮಾಡಿದ್ದಾನೆ.

ಕೂಲಿಮಾಡಿ ಜೀವನ ಸಾಗಿಸೋ ದರ್ಶನ್ ಪೋಷಕರು ಇದ್ದ ಒಬ್ಬನೇ ಮಗ ಚೆನ್ನಾಗಿರಲಿ ಎಂದು ಶಿಕ್ಷಣ ಕೊಡಿಸಿದ್ರು. ಆದ್ರೆ ಪ್ರೀತಿ ಪ್ರೇಮ ಅಂತಾ ಸುತ್ತಾಡಿ ಈಗ ಜೀವವನ್ನೇ ಕಳೆದುಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಒಟ್ಟಿನಲ್ಲಿ ಇಷ್ಟಪಟ್ಟ ಹುಡುಗಿ ಪ್ರೀತಿ ನಿರಾಕರಿಸಿದ್ಲು ಎನ್ನೋ ಒಂದೇ ಒಂದು ಕಾರಣಕ್ಕೆ ದುಡುಕಿ ಆತ್ಮಹತ್ಯೆಯ ಯತ್ನ ಮಾಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ, ಇದ್ದ ಒಬ್ಬ ಮಗನ ಮೇಲೆ ಬೆಟ್ಟದಷ್ಟು ಕನಸು ಕಟ್ಟಿಕೊಂಡು ಕಾದಿದ್ದ ಹೆತ್ತವರು ಈಗ ಅನಾಥವಾಗಿದ್ದಾರೆ, ಓದೋ ವಯಸ್ಸಿನಲ್ಲಿ ಯುವಜನರ ಇಂತಹ ದಾರಿತಪ್ಪಿದ ಪ್ರೀತಿ ಪ್ರೇಮದಿಂದ ತಮ್ಮ ಜೀವನಕ್ಕೂ ಕೊಳ್ಳಿ ಇಟ್ಟು ಕುಟುಂಬಗಳನ್ನು ಅತಂತ್ರ ಮಾಡುತ್ತಿರೋದು ನಿಜಕ್ಕೂ ದುರಂತ ಸಂಗತಿ.
