ಮೂಲ್ಕಿ :(ಫೆ.12) ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಭಾಗಿಯಾದರು.


ಇದನ್ನೂ ಓದಿ: ಹಾಸನ: ನೀನೇ ನನ್ನ ಜೀವನ, ನೀನೇ ನನ್ನ ಜೀವಾ ಎಂದು ಪ್ರೀತಿ ಮಾಡಿದ ಯುವಕ
ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ವೀಕ್ಷಿಸಿದರು.


ವಿಶಾಲ್ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು, ಇದಕ್ಕಾಗಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದು, ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ಅರ್ಚಕರು ಸೂಚಿಸಿದ ಹಿನ್ನೆಲೆಯಲ್ಲಿ ಅವರು ಒಪ್ಪಿಕೊಂಡರು. ಮಾಧ್ಮಮದೊಂದಿಗೆ ಮಾತನಾಡಿದ ವಿಶಾಲ್ ಕಾಂತಾರ ನಿನಿಮಾದಲ್ಲಿ ದೈವ ಮತ್ತು ಇಲ್ಲಿನ ನೇಮೋತ್ಸವದ ಬಗ್ಗೆ ತಿಳಿದಿದ್ದೇನೆ.

ಇದೀಗ ಪ್ರಥಮ ಬಾರಿಗೆ ತುಳುನಾಡಿನ ನೇಮೋತ್ಸವವನ್ನು ನೋಡುತ್ತಿದ್ದೇನೆ ತುಂಬಾ ಖುಷಿ ನೀಡಿದೆ. ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ಇದೀಗ ಇಲ್ಲಿಗೆ ಭೇಟಿ ನೀಡಿದ್ದೇನೆ, ಬೆಳೆಯುತ್ತಿರುವ ತುಳು ಚಿತ್ರರಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮಿಳಿನಲ್ಲಿ ಹಲವು ಸಿನಿಮಾಗಳ ಮಾತುಕಥೆ ನಡೆಯುತ್ತಿದೆ ಎಂದರು.
